ಬೆಂಗಳೂರು: ಇತ್ತೀಚೆಗೆ ತೆರೆಕಂಡ ತನುಷ್ ಶಿವಣ್ಣ (Tanush Shivanna) ಅಭಿನಯದ ʼನಟ್ವರ್ ಲಾಲ್ʼ ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್‌ನಲ್ಲೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡ ಚಿತ್ರವೂ ಹೌದು. ನಟ್ವರ್ ಲಾಲ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ʼಬಾಸ್ʼ ಚಿತ್ರದ (Kannada New Movie) ಮುಹೂರ್ತ ಸಮಾರಂಭ ಇತ್ತೀಚಿಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ತಿಂಗಳ 20 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.


ಸಿರಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಪಿ. ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ʼನಟ್ವರ್ ಲಾಲ್ʼ ಚಿತ್ರದ ನಿರ್ದೇಶಕ ವಿ.ಲವ ಅವರೆ ನಿರ್ದೇಶನ ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Fashion Pageant News: ಮಿಸ್-ಮಿಸ್ಟರ್-ಮಿಸೆಸ್ ಶಿವಮೊಗ್ಗ ಬ್ಯೂಟಿ ಪೇಜೆಂಟ್ ವಿಜೇತರು
ʼವಿಕ್ರಾಂತ್ ರೋಣʼ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಡೇವಿ ಸುರೇಶ್ ಅವರ ಸಂಗೀತ ನಿರ್ದೇಶನವಿರುವ ʼಬಾಸ್ʼ ಚಿತ್ರಕ್ಕೆ ʼಸತ್ಯಮೇವ ಜಯತೇʼ ಎಂಬ ಅಡಿಬರಹವಿದೆ. ಇದೊಂದು ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ.