Sunday, 11th May 2025

KGL Ravi: ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್‌. ರವಿ ಹೃದಯಾಘಾತದಿಂದ ನಿಧನ

K G Ravi

ತುಮಕೂರು: ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಹೊಟೇಲ್ ಉದ್ಯಮಿ ಕೆ.ಜಿ.ಎಲ್. ರವಿ (57) (KGL Ravi) ಬುಧವಾರ ಹೃದಯಾಘಾತದಿಂದ ನಿಧನರಾಗಿದರು. ಪಕ್ಷವನ್ನು ಬಲವಾಗಿ ಕಟ್ಟುವ ಉದ್ದೇಶದಿಂದ ಇತ್ತೀಚೆಗೆ ಜಿಲ್ಲಾ ಜೆಡಿಯು ಕಚೇರಿಯನ್ನು ಸಹ ಕರಿಬಸವೇಶ್ವರ ವೃತ್ತದಲ್ಲಿ ತೆರೆದಿದ್ದರು. ಇವರು ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜೆಡಿಯು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು,ಜೆ.ಹೆಚ್.ಪಟೇಲ್, ಎಂ.ಪಿ.ನಾಡಗೌಡ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಮೂಲತಃ ತುಮಕೂರಿನವರೇ ಆದ ಕೆ.ಜಿ.ಎಲ್. ರವಿ ಅವರು ನಗರದ ಅರಳೇಪೇಟೆಯಲ್ಲಿ ವಾಸವಾಗಿದ್ದರು. ಇವರು ಹೊರಪೇಟೆ ಸರ್ಕರ್‌- ಕೆ.ಆರ್ ಬಡಾವಣೆ ರಸ್ತೆಯಲ್ಲಿ ಚಂದ್ರಮೌಳೇಶ್ವರ ಹೆಸರಿನ ಹೊಟೇಲ್ ನಡೆಸುತ್ತಿದ್ದರು. ಇವರ ಅಂತ್ಯಕ್ರಿಯೆ ಅ. 24ರ ಗುರುವಾರ ಬೆಳಗ್ಗೆ ಕುಣಿಗಲ್ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದೆದೆ.

ಈ ಸುದ್ದಿಯನ್ನೂ ಓದಿ | Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಮಹಿಳೆಗೆ; ಮಾಲತಿ, ಶಾಂತೇಶ್ವರ, ವೈದೇಹಿ, ಲಲಿತಾ ಹೆಸರು ಮುಂಚೂಣಿಯಲ್ಲಿ