Tuesday, 13th May 2025

ಜಮಖಂಡಿ ಬ್ರೇಕಿಂಗ್‌: ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾದವನಿಗೆ ಕಲ್ಲೆಸೆತ, ಚಾಲಕನ ಸಾವು

Self Harming

ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್​ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋ ಇಚ್ಛೆ ಕಲ್ಲು ಬೀಸಿದ್ದು, ಚಾಲಕ ಮೃತಪಟ್ಟಿದ್ದಾರೆ. ಜಮಖಂಡಿಯಲ್ಲಿ ಘಟನೆ ಸಂಭವಿಸಿದೆ.

ಜಮಖಂಡಿ ಸಾರಿಗೆ ಘಟಕದ ಬಸ್​ ಚಾಲಕ ಎನ್.ಕೆ. ಅವಟಿ (55) ಮೃತ ದುರ್ದೈವಿ. ಸಾರಿಗೆ ಬಸ್​ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುತ್ತಿದ್ದ ಕಾರಣ ಮೇಲಧಿಕಾರಿಗಳ ಸೂಚನೆಯಂತೆ ಎನ್.ಕೆ. ಅವಟಿ ಕೆಲಸಕ್ಕೆ ಹಾಜರಾಗಿದ್ದರು.

ಶುಕ್ರವಾರ ವಿಜಯಪುರದಿಂದ ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಎನ್.ಕೆ. ಅವಟಿ ಬರುತ್ತಿದ್ದರು. ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್​ ಅನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬಸ್​ನತ್ತ ಕಲ್ಲು ತೂರಿದ್ದಾರೆ. ಕಲ್ಲುಗಳು ಗಾಜನ್ನು ಒಡೆದುಕೊಂಡು ಒಳ ತೂರಿ ಚಾಲಕನ ಮೇಲೆ ಬಿದ್ದಿದೆ. ಕಲ್ಲಿನೇಟಿಗೆ ಚಾಲಕ ಸ್ಥಿತಿ ಗಂಭೀರವಾಗಿತ್ತು. ಕುತ್ತಿಗೆಗೆ ಕಲ್ಲು ಬೀಳು ತ್ತಿದ್ದಂತೆ ವಾಹನ ನಿಲ್ಲಿಸಿದ ಚಾಲಕ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದರು.

ಕೂಡಲೇ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply

Your email address will not be published. Required fields are marked *