Thursday, 15th May 2025

ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ದಾಳಿ

ಬೆಂಗಳೂರು: ನಗರದ ಸಪ್ತಗಿರಿ ಆಸ್ಪತ್ರೆ, ಬಿಜಿಎಸ್​ ವಿದ್ಯಾಸಂಸ್ಥೆಗಳು ಸೇರಿದಂತೆ ರಾಜ್ಯದ ಹಲವು ಮೆಡಿಕಲ್ ಕಾಲೇಜುಗಳ ಮೇಲೆ ಇಂದು ಐಟಿ ದಾಳಿ ನಡೆದಿದೆ. ವಿಜಯನಗರ ಆದಿಚುಂಚನಗಿರಿ ಮಠಕ್ಕೆ‌ ಆಗಮಿಸಿದ್ದ ಐಟಿ ಅಧಿಕಾರಿಗಳು ಬಿಜಿಎಸ್​ ವಿದ್ಯಾಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.

ಸಪ್ತಗಿರಿ ಹಾಗೂ ಬಿಜಿಎಸ್​ ಆಸ್ಪತ್ರೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಫೈಲ್​ಗ​ಳನ್ನ ಪರಿಶೀಲಿಸುತ್ತಿದ್ದು, ಹಲ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಕುಂಬಳಗೂಡಿನ ಆದಿ ಚುಂಚನಗಿರಿ ಶಾಖಾ ಮಠಕ್ಕೆ ತೆರಳಿದ್ದ ಅಧಿಕಾರಿಗಳು ಅಲ್ಲಿ ಕೆಲ ಮಾಹಿತಿಗಳನ್ನು ಪಡೆದುಕೊಂಡು ನಂತರ ಕುಂಬಳಗೂಡಿನ ವಿದ್ಯಾಸಂಸ್ಥೆಗೆ ತೆರಳಿದ್ದಾರೆ.

ಸಂಸ್ಥೆ ವಿರುದ್ಧ ಕೊಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಿಂದ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಅಂತ ತಿಳಿದುಬಂದಿದೆ.
ದಾಳಿ ಮಾಡಲಾದ ಸಂಸ್ಥೆಗಳು

1. ಆಕಾಶ್ ಆಸ್ಪತ್ರೆ ಹಾಗು ಮೆಡಿಕಲ್ ಕಾಲೇಜು ದೇವನಹಳ್ಳಿ
ಓನರ್ : ಮುನಿಯಪ್ಪ
ನಿವಾಸ ಸಹಕಾರ ನಗರ ಹಾಗು ಆಕಾಶ್ ಅಸ್ಪತ್ರೆಯಲ್ಲಿ ದಾಳಿ

2. ಸಪ್ತಗಿರಿ ಅಸ್ಪತ್ರೆ ಹಾಗು ಮೆಡಿಕಲ್ ಕಾಲೇಜು
ಓನರ್ : ದಯಾನಂದ
ನಿವಾಸ : ಮಾರ್ಗೋಸ ರೋಡ್ ಮಲ್ಲೇಶ್ವರ

3. ಬಿಜಿಎಸ್ ಅಸ್ಪತ್ರೆ
ಸ್ಥಳ: ಕೇಂಗೆರಿ ಬಳಿ
ಶ್ರೀದೇವಿ ಮಿಡಿಕಲ್ ಕಾಲೇಜು ಹಾಗು ಅಸ್ಪತ್ರೆ

4. ಶ್ರೀ ದೇವಿ ಮೇಡಿಕಲ್ ಕಾಲೇಜು.
ಸ್ಥಳ: ತುಮಕೂರು
ಓನರ್ : ಹುಲಿಯಾರ್ ನಾಯಕ್
ನಿವಾಸ : ಸೋಮೇಶ್ವರದಲ್ಲಿ ಇರುವ ನಿವಾಸ

Leave a Reply

Your email address will not be published. Required fields are marked *