Wednesday, 14th May 2025

ನಾಗರಿಕ ಸೇವೆಗಳಂತೆ ಶೀಘ್ರದಲ್ಲೇ ಭಾರತೀಯ ವೈದ್ಯಕೀಯ ಸೇವೆ

ಬೆಂಗಳೂರು: ಐಎಎಸ್, ಐಎಫ್‌ಎಸ್, ಐಪಿಎಸ್ ನಾಗರಿಕ ಸೇವೆಗಳ ಮಾದರಿಯಲ್ಲಿ ಭಾರತೀಯ ವೈದ್ಯಕೀಯ ಸೇವೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ.

ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರುವ ಉದ್ದೇಶದಿಂದ ಸಂಸದೀಯ ಸಮಿತಿ ಇತ್ತೀಚೆಗೆ ಭಾರತೀಯ ವೈದ್ಯಕೀಯ ಸೇವೆ ಆರಂಭಿಸುವ ಪ್ರಸ್ತಾಪ ಮಾಡಿದೆ.

ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ರಾಜನ್ ಶರ್ಮಾ ಅವರು, ಆರೋಗ್ಯ ಸಂಸ್ಥೆಗಳಲ್ಲಿ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಆರೋಗ್ಯ ವೃತ್ತಿಪರರ ಅಗತ್ಯ ಅದರಲ್ಲೂ ಸರ್ಕಾರದ ಮಟ್ಟದಲ್ಲಿ ಅತ್ಯಗತ್ಯ ಎಂದು ಹೇಳಿದ್ದಾರೆ.

ಆರೋಗ್ಯ ಸೌಲಭ್ಯಗಳ ಅಸಮರ್ಪಕತೆಯ ದೃಷ್ಟಿಯಿಂದ ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವಿನ ಸಮನ್ವಯ ಮತ್ತು ಸಹಯೋಗದ ಕೊರತೆಯನ್ನು ಕೋವಿಡ್-19 ಬಹಿರಂಗಪಡಿಸಿದೆ ಎಂದು ರಾಜನ್ ಅವರು ತಮ್ಮ ನೀತಿ ವರದಿಯಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *