Saturday, 10th May 2025

IDBI jobs alert: ಐಡಿಬಿಐ ಬ್ಯಾಂಕ್‌ ಹುದ್ದೆಗಳ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ, ಹೀಗೆ ಡೌನ್‌ಲೋಡ್‌ ಮಾಡಿಕೊಳ್ಳಿ

IDBI Bank Recruitment 2024

ಬೆಂಗಳೂರು: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್‌ ಆಫ್‌ ಇಂಡಿಯಾದ (IDBI jobs alert) 1000 ಎಕ್ಸಿಕ್ಯೂಟಿವ್ (ಸೇಲ್ಸ್‌ ಅಂಡ್‌ ಆಪರೇಷನ್ಸ್‌) ಹುದ್ದೆಗಳ ನೇಮಕಾತಿ ಸಂಬಂಧ ಡಿಸೆಂಬರ್ 01ರಂದು ಆನ್‌ಲೈನ್‌ ಪರೀಕ್ಷೆ (IDBI exam) ನಡೆಯಲಿದೆ. ಈ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಪ್‌ಲೋಡ್‌ ಮಾಡಲಾಗಿದ್ದು, ಇದೀಗ ಅಭ್ಯರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಹಾಕಿರುವವರು ಡಿಸೆಂಬರ್ 01 ರವರೆಗೆ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಮುಖ ದಿನಾಂಕಗಳು, ಪರೀಕ್ಷೆ ವಿಧಾನ, ಇತರೆ ಮಾಹಿತಿಗಳು ಇಲ್ಲಿವೆ.

ಹುದ್ದೆ ಹೆಸರು : ಎಕ್ಸಿಕ್ಯೂಟಿವ್ (ಸೇಲ್ಸ್‌ ಅಂಡ್ ಆಪರೇಷನ್ಸ್‌ ವಿಭಾಗ).
ಹುದ್ದೆಗಳ ಸಂಖ್ಯೆ : 1000

ಪ್ರಮುಖ ದಿನಾಂಕಗಳು

ಪ್ರವೇಶ ಪತ್ರ ಬಿಡುಗಡೆ ದಿನಾಂಕ 26-11-2024
ಪ್ರವೇಶ ಪತ್ರ ಡೌನ್‌ಲೋಡ್‌ಗೆ ಕೊನೆ ದಿನಾಂಕ 01-12-2024
ಆನ್‌ಲೈನ್ ಪರೀಕ್ಷೆ ದಿನಾಂಕ 01-12-2024

ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ?

  • ಐಡಿಬಿಐ ಬ್ಯಾಂಕ್ ಎಕ್ಸಿಕ್ಯೂಟಿವ್ ಪರೀಕ್ಷೆ ಪ್ರವೇಶ ಪತ್ರಕ್ಕೆ ಐಬಿಪಿಎಸ್‌ ಆನ್‌ಲೈನ್‌ ವೆಬ್‌ಸೈಟ್‌ ಗೆ ಭೇಟಿ ನೀಡಬೇಕು.
  • ಪ್ರವೇಶ ಡೌನ್‌ಲೋಡ್‌ಗಾಗಿ ಐಬಿಪಿಎಸ್‌ ಲಾಗಿನ್‌ ಲಿಂಕ್‌ಗಾಗಿ ಕ್ಲಿಕ್ ಮಾಡಿ.
  • ಓಪನ್ ಆದ ವೆಬ್‌ಪೇಜ್‌ನಲ್ಲಿ ರಿಜಿಸ್ಟರ್ ನಂಬರ್ / ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಿ.
  • ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಈ ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರದ ಜತೆಗೆ, ಅಧಿಕೃತ ಸರ್ಕಾರಿ ಗುರುತಿನ ಚೀಟಿ ತೆಗೆದುಕೊಂಡು ಹಾಜರಾಗಬೇಕು.

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್‌ ಆಫ್‌ ಇಂಡಿಯಾ ಎಕ್ಸಿಕ್ಯೂಟಿವ್ ಪರೀಕ್ಷೆ ವಿಧಾನ
ಆನ್‌ಲೈನ್ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ಇಷ್ಟು ಹಂತಗಳು ಇರುತ್ತವೆ.
ಆನ್‌ಲೈನ್‌ ಪರೀಕ್ಷೆಯನ್ನು ಒಟ್ಟು 120 ಅಂಕಗಳಿಗೆ ನಡೆಸಲಾಗುತ್ತದೆ.
ಲಾಜಿಕಲ್ ರೀಸನಿಂಗ್, ಇಂಗ್ಲಿಷ್ ಲಾಂಗ್ವೇಜ್, ಡಾಟಾ ಅನಾಲಿಸಿಸ್, ಇಂಟರ್‌ಪ್ರೆಟೇಶನ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಜೆನೆರಲ್ / ಎಕನಾಮಿ / ಬ್ಯಾಂಕಿಂಗ್ ಅರಿವು, ಕಂಪ್ಯೂಟರ್ / ಐಟಿ ಕುರಿತು ಪ್ರಶ್ನೆಗಳು ಇರುತ್ತವೆ.
ಮಲ್ಟಿಪಲ್ ಚಾಯ್ಸ್‌ ಪ್ರಶ್ನೆ ಪತ್ರಿಕೆ ಇದಾಗಿದ್ದು, ನಾಲ್ಕು ಉತ್ತರಗಳಲ್ಲಿ ಒಂದು ಉತ್ತರ ಆಯ್ಕೆ ಮಾಡಬೇಕಾಗುತ್ತದೆ.
ಪರೀಕ್ಷೆ ಕೇಂದ್ರಕ್ಕೆ ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಬೇಕು.

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್‌ ಆಫ್‌ ಇಂಡಿಯಾ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕವಾಗುವವರಿಗೆ ಮೊದಲ ವರ್ಷ ರೂ.29,000 ವೇತನ ಮಾಸಿಕ ನೀಡಲಾಗುತ್ತದೆ. ಎರಡನೇ ವರ್ಷ ಪ್ರತಿ ಮಾಸಿಕ ರೂ.31,000 ನೀಡಲಾಗುತ್ತದೆ.

ಇದನ್ನೂ ಓದಿ: Bank Jobs alert: ಕರ್ಣಾಟಕ ಬ್ಯಾಂಕ್‌ ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ನ.30 ಕೊನೆಯ ದಿನ