ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆನ್ನಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು (inetrim bail) ಪಡೆದುಕೊಂಡಿರುವ ನಟ ದರ್ಶನ್ (Actor Darshan) ಅವರ ಜಾಮೀನಿನ ಭವಿಷ್ಯ ಇಂದು ಹೈಕೋರ್ಟ್‌ನಲ್ಲಿ (karnataka high court) ನಿರ್ಧಾರವಾಗಲಿದೆ.
ಬೆನ್ನು ನೋವಿನ ಕಾರಣ ತಿಳಿಸಿ ಅನುಕಂಪದ ಆಧಾರದ ಮೇಲೆ ನಟ ದರ್ಶನ್ ಜಾಮೀನು ಪಡೆದಿದ್ದರು. ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದುವರೆಗೂ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಹಾಗಾಗಿ ಇಂದು ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗದ್ದಕ್ಕೆ ಸೂಕ್ತ ಕಾರಣ ತಿಳಿಸದಿದ್ದರೆ ಅವರ ಜಾಮೀನು ರದ್ದಾಗಲಿದೆ.
ಆಸ್ಪತ್ರೆಗೆ ದಾಖಲಾಗಿ ಇಷ್ಟು ದಿನ ಕಳೆದರೂ ಕೂಡ ನಟ ದರ್ಶನ್ ಅವರು ಬೆನ್ನು ನೋವಿನ ಸರ್ಜರಿಗೆ ಒಳಗಾಗಿಲ್ಲ. ಹಾಗಾಗಿ ಇಂದು ಹೈಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಡಿಸೆಂಬರ್ 3ರಂದು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ನಲ್ಲಿ A1 ಆರೋಪಿ ಪವಿತ್ರ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ, ಎಲ್ಲಾ ಆರೋಪಿಗಳ ಆರೆಸ್ಟ್ ಮೆಮೋದ ಕಾಪಿ ನೀಡಲು ಆರೋಪಿಗಳ ಪರ ವಕೀಲರಿಗೆ ಜಡ್ಜ್ ವಿಶ್ವಜೀತ್ ಶೆಟ್ಟಿ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.ಇದೆ ವೇಳೆ ನಟ ದರ್ಶನ್ ಅವರ ಜಾಮೀನು ಅರ್ಜಿ ಕೂಡ ಡಿಸೆಂಬರ್ 6 ರಂದು ಮುಂದೂಡಿ ಆದೇಶಿಸಿದ್ದರು.
ಹೈಕೋರ್ಟ್‌ನಲ್ಲಿ ಡಿ. 3ರಂದು ಕೊಲೆ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ ಮೊದಲಾದವರ ಜಾಮಿನು ಅರ್ಜಿ ವಿಚಾರಣೆ ನಡೆಯಿತು. ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಪರ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: Darshan: ಆರೋಪಿ ದರ್ಶನ್‌ಗೆ ಸರ್ಜಿಕಲ್ ಚೇರ್