Saturday, 10th May 2025

Haveri News: ಕುಳೇನೂರು; ಕಬ್ಬಿನ ಹೊಲದಲ್ಲಿ 2 ಚಿರತೆ ಮರಿಗಳು ಪ್ರತ್ಯಕ್ಷ!

Haveri News

ಹಾವೇರಿ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಎರಡು ಚಿರತೆ ಮರಿಗಳು (Leopard Cubs) ಕಬ್ಬು ಕಟಾವು ಕಾರ್ಮಿಕರ ಕಣ್ಣಿಗೆ ಬಿದ್ದಿದ್ದು, ಹೊಲದ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಹಾವೇರಿ (Haveri News) ತಾಲೂಕಿನ ಕುಳೇನೂರು ಗ್ರಾಮದಲ್ಲಿ ‌ಭಾನುವಾರ ನಡೆದಿದೆ.

ಕುಳೇನೂರು ಗ್ರಾಮದ ಜಗದೀಶ್ ‌ಮತ್ತಿಹಳ್ಳಿ‌ ಎನ್ನುವವರ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಕಾರ್ಮಿಕರ ‌ಕಣ್ಣಿಗೆ‌ ಜೋಡಿ ಚಿರತೆ ಮರಿಗಳು ಕಂಡಿವೆ. ತಕ್ಷಣವೇ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | School Holidays: 2025ನೇ ಸಾಲಿನ ಶಾಲಾ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ

ಕಬ್ಬಿನ ಹೊಲಕ್ಕೆ ಭೇಟಿ ನೀಡಿದ ಆರ್‌ಎಫ್‌ಓ ಮಾಹಾಂತೇಶ ನ್ಯಾಮತಿ‌ ಚಿರತೆ ಮರಿಗಳನ್ನು ಪಡೆದು ತಾಯಿ‌ ಚಿರತೆ ಬಂದು‌ ಮರಿಗಳನ್ನು ತಗೆದುಕೊಂಡು ಹೋಗುತ್ತದೆ ಎಂದು ದೂರದಲ್ಲಿ ‌ನಿಂತು ತಮ್ಮ ಸಿಬ್ಬಂದಿ ಜತೆಗೆ ಕಾಯ್ದು ನಿಂತರು. ಸಂಜೆ ವೇಳೆ ಬಂದ ತಾಯಿ‌ ಚಿರತೆ ಒಂದು ಮರಿಯನ್ನು ತೆಗೆದುಕೊಂಡು ಹೋಗಿದೆ.‌ ಇನ್ನೊಂದು ಮರಿ ಕಬ್ಬಿನ ಹೊಲದಲ್ಲಿ ಇದ್ದು, ಅರಣ್ಯ ಇಲಾಖೆಯವರು ತಾಯಿ ಚಿರತೆ ಬರುವಿಕೆಗಾಗಿ ದೂರದಲ್ಲಿ ‌ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.