Sunday, 11th May 2025

ತುಂಡರಿಸಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯರ ಶವ ಪತ್ತೆ

Self Harming

ಮಂಡ್ಯ: ಅಪರಿಚಿತ ಮಹಿಳೆಯರಿಬ್ಬರ ಅರ್ಧ ಶವಗಳು ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

ಪಾಂಡವಪುರ ತಾಲೂಕಿನಲ್ಲಿ ಒಬ್ಬ ಮಹಿಳೆಯ ಅರ್ಧ ಶವ, ಶ್ರೀರಂಗಪಟ್ಟಣ ತಾಲೂಕಿ ನಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ  ಪತ್ತೆಯಾಗಿದೆ. ಮಹಿಳೆಯರನ್ನು ಒಂದೇ ರೀತಿ ಹತ್ಯೆ ಮಾಡಲಾಗಿದ್ದು, ತಲೆ, ಎದೆ, ಕೈಗಳು ಇಲ್ಲದೆ ಹೊಟ್ಟೆಯಿಂದ ಕೆಳ ಭಾಗ ಮಾತ್ರ ಪತ್ತೆಯಾಗಿದೆ. ಕಾಲುಗಳನ್ನು ಕಟ್ಟಿ ದೇಹವನ್ನು ತುಂಡರಿಸಿ ಅರ್ಧಭಾಗವನ್ನ ಕಾಲುವೆ ಗಳಿಗೆ ಎಸೆದಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಚಿಕ್ಕ ದೇವರಾಜ ಕಾಲುವೆಯಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ ಪತ್ತೆ ಯಾಗಿದೆ. ಕಾಲುವೆಯಲ್ಲಿ ಸಿಕ್ಕ ಅರ್ಧ ಶವ ಸುಮಾರು 30 ವರ್ಷ ವಯಸ್ಸಿನ ಮಹಿಳೆಯದ್ದು, ಅರಕೆರೆ ಗ್ರಾಮದ ಕಾಲುವೆಯಲ್ಲಿ ಪತ್ತೆಯಾದ ಶವ 40 ರಿಂದ 45 ವಯಸ್ಸಿನ ಮಹಿಳೆಯದ್ದು ಎನ್ನಲಾಗಿದೆ.

ಮಹಿಳೆಯರನ್ನು ಯಾರು ಕೊಂದದ್ದು? ಈ ಮಹಿಳೆಯರು ಯಾರು? ಎಂಬ ಸುಳಿವು  ಸಿಕ್ಕಿಲ್ಲ. ಅರಕೆರೆ ಹಾಗೂ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.