Sunday, 11th May 2025

ಪಂಚಾಯಿತಿ ಕದನ ಕುತೂಹಲಕ್ಕೆ ಇಂದು ತೆರೆ: ಮತ ಎಣಿಕೆ ಪ್ರಕ್ರಿಯೆ ಶುರು

ಬೆಂಗಳೂರು : ಕರೊನಾತಂಕದ ನಡುವೆ ಬಿರುಸಿನ ಪ್ರಚಾರ, ತುರುಸಿನ ಪೈಪೋಟಿ ಕಂಡ ಪಂಚಾಯಿತಿ ಕದನ ಕುತೂಹಲಕ್ಕೆ ಬುಧವಾರ ತೆರೆ ಬೀಳಲಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಎರಡೂ ಹಂತಗಳಲ್ಲಿ ಒಟ್ಟು 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ನಡೆದ ಚುನಾವಣೆಗೆ 2,22,814 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾರ ಪ್ರಭು ನೀಡಿದ ಆದೇಶ ಏನೆಂದು ಗೊತ್ತಾಗ ಲಿದೆ. ಈ ಮಧ್ಯೆ ಒಟ್ಟು 8,074 ಉಮೇದುವಾರರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ನಾಮಪತ್ರ ಸಲ್ಲಿಕೆಯಾಗದೆ ಒಟ್ಟು 648 ಸ್ಥಾನಗಳು ಖಾಲಿ ಉಳಿದಿವೆ.

ಮೊದಲ ಹಂತದಲ್ಲಿ 3,019 ಗ್ರಾ.ಪಂ.ಗಳ 43,238 ಸ್ಥಾನಗಳಿಗೆ ಶೇ.82.13 ಹಾಗೂ ಎರಡನೇ ಹಂತದಲ್ಲಿ 2,709 ಗ್ರಾ.ಪಂ.ಗಳ 39,378 ಸ್ಥಾನಗಳಿಗೆ ಶೇ.80.71 ಮತದಾನವಾಗಿದೆ.

ಗ್ರಾ.ಪಂ. ಚುನಾವಣೆಯ ಮತಗಳ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಪ್ರಾರಂಭವಾಗಲಿದ್ದು, ಆಯಾ ಜಿಲ್ಲಾ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ, ಉಳಿದೆಡೆ ಮತಪತ್ರಗಳನ್ನು ಬಳಸಲಾಗಿದೆ. ಅಲ್ಲದೆ, ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಿರುವ ಹಿನ್ನೆಲೆಯಲ್ಲಿ ಮತಗಳ ಎಣಿಕೆ ಪೂರ್ಣಗೊಳ್ಳು ವುದು, ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸುವುದು ತಡವಾಗಲಿದೆ.

 

Leave a Reply

Your email address will not be published. Required fields are marked *