Saturday, 10th May 2025

Goodachari 2 Movie: ಜಿ2‌ ‘ಗೂಢಚಾರಿ 2’ ಸಿನಿಮಾದಲ್ಲಿ ಅಡಿವಿ ಶೇಷ್‌ಗೆ ಜೋಡಿಯಾದ ವಮಿಕಾ ಗಬ್ಬಿ

Goodachari 2 Movie

ಬೆಂಗಳೂರು: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸ್ಪೈ ಥ್ರಿಲ್ಲರ್‌ G2 (ಗೂಢಚಾರಿ 2) ಸಿನಿಮಾ (Goodachari 2 Movie) ಈಗಾಗಲೇ ಹತ್ತು ಹಲವು ಕಾರಣಕ್ಕೆ ಕುತೂಹಲ ಕೆರಳಿಸುತ್ತಿದೆ. ಈಗಾಗಲೇ ಮೊದಲ ಭಾಗ ಯಶಸ್ವಿಯಾದ ಬಳಿಕ, ಈ ಸಿನಿಮಾ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ. ಈಗಾಗಲೇ ಇದೇ ಸಿನಿಮಾದಲ್ಲಿ ಇಮ್ರಾನ್‌ ಹಶ್ಮಿ ಪ್ರಮುಖ ಪಾತ್ರ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಈಗ ಇದೇ ಸಿನಿಮಾ ಬಳಗಕ್ಕೆ ಬ್ಯೂಟಿಯ ಆಗಮನವಾಗಿದೆ. ಅಂದರೆ, ವಮಿಕಾ ಗಬ್ಬಿ (Wamiqa Gabbi) ಜಿ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಪಂಜಾಬಿ, ಬಾಲಿವುಡ್, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ವಮಿಕಾ ಗಬ್ಬಿ, ಈಗ ಪ್ಯಾನ್‌ ಇಂಡಿಯನ್‌ ಜಿ2 ಸಿನಿಮಾದ ಭಾಗವಾಗಿದ್ದಾರೆ. ಜಿ2 ಚಿತ್ರದಲ್ಲಿ ನಾಯಕ ಅಡಿವಿ ಶೇಷ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಅಷ್ಟೇ ಖುಷಿಯಲ್ಲಿದ್ದಾರೆ ವಮಿಕಾ. ಇತ್ತೀಚೆಗಷ್ಟೇ ಅಡಿವಿ ಶೇಷ್‌ ಅವರೊಂದಿಗೆ ಯುರೋಪ್‌ ದೇಶದಲ್ಲಿನ ಶೂಟಿಂಗ್ ಮುಗಿಸಿದ ವಮಿಕಾ, ಸಿನಿಮಾ ಬಗ್ಗೆ ತುಂಬ ಎಗ್ಸೈಟ್‌ ಆಗಿದ್ದಾರೆ.

‘ನಾನು G2 ಸಿನಿಮಾದ ಭಾಗವಾಗಲು ತುಂಬ ಉತ್ಸುಕಳಾಗಿದ್ದೇನೆ. ಈಗಾಗಲೇ ಪಾರ್ಟ್‌ 1 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ತನ್ನದೆ ಆದ ಬೆಂಚ್‌ಮಾರ್ಕ್‌ ಸೃಷ್ಟಿಸಿದೆ. ಈಗ ಇದೇ ಟೀಮ್‌ನ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪಾರ್ಟ್‌ 2 ಮೂಲಕ ಪ್ರೇಕ್ಷಕನಿಗೆ ಮತ್ತಷ್ಟು ಹೊಸದನ್ನು ನೀಡಲಿದ್ದೇವೆ’ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Winter Makeup Kit: ಚಳಿಗಾಲದಲ್ಲಿ ನಿಮ್ಮ ಮೇಕಪ್ ಕಿಟ್‌‌ನಲ್ಲಿರಬೇಕಾದ ಸೌಂದರ್ಯ ವರ್ಧಕಗಳಿವು!

ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಮತ್ತು ಅಭಿಷೇಕ್ ಅಗರ್ವಾಲ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜಿ 2 ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಸ್ಪೈ ಥ್ರಿಲ್ಲರ್‌ ಗೂಢಚಾರಿ 2 ಚಿತ್ರದಲ್ಲಿ ಅಡಿವಿ ಶೇಷ್, ವಮಿಕಾ ಗಬ್ಬಿ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿದ್ದರೆ, ಮುರಳಿ ಶರ್ಮಾ, ಸುಪ್ರಿಯಾ ಯರ್ಲಗಡ್ಡ ಮತ್ತು ಮಧು ಶಾಲಿನಿ ಸೇರಿದಂತೆ ಇನ್ನೂ ಹಲವು ಕಲಾವಿದರಿದ್ದಾರೆ.

Leave a Reply

Your email address will not be published. Required fields are marked *