Saturday, 10th May 2025

Basavaraja Bommai: ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ! ಬೊಮ್ಮಾಯಿ ಗೇಲಿ

Basavaraja Bommai

ಗದಗ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟವೇ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಗೇಲಿ ಮಾಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಸ್ಥಿತಿ ನೋಡಿದರೆ ನನಗೆ ಪಾಪ ಅನಿಸುತ್ತದೆ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗಲೇ ಎಲ್ಲರೂ ಸಿಎಂ ಕುರ್ಚಿಗೆ ಟವೆಲ್ ಹಾಕುವುದು, ನಾನು ಸಿಎಂ, ನಾನು ಸಿಎಂ ಎಂದು ಪೈಪೋಟಿ ಮಾಡುವುದು ನಡೆಯುತ್ತಿದೆ. ಒಬ್ಬ ನಾಯಕನ ಬಗ್ಗೆ ಅವಿಶ್ವಾಸ ಏನಿದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Greater Bengaluru Governance Bill 2024: ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ; ಇಲ್ಲಿ ಕನ್ನಡಿಗರೇ ಸಾರ್ವಭೌಮ ಎಂದ ಅಶೋಕ್

ಸಿಎಂ ಸಿದ್ದರಾಮಯ್ಯ ಅವರು ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಮೇಲೆ ತನ್ನಿಂದ ತಾನೇ ಆಡಳಿತ ಬಿಗಿಯಾಗುತ್ತದೆ. ಒಬ್ಬ ಮಂತ್ರಿಯೂ ಅಭಿವೃದ್ಧಿ ಬಗ್ಗೆ ಗಮನ ಹರಿಸ್ತಿಲ್ಲ. ಬರೀ ರಾಜಕಾರಣ, ಅಧಿಕಾರ ಹಿಡಿಯುವಂತಹ ವ್ಯಾಮೋಹದಲ್ಲಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | Suburban Rail Project: ಉಪನಗರ ರೈಲು ಯೋಜನೆ; 2026ರ ಡಿಸೆಂಬರ್‌ಗೆ ಕಾರಿಡಾರ್‌ 2, 4 ಪೂರ್ಣ

ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗಿ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ ಇದೆ, ಹುದ್ದೆಗಳ ಭರ್ತಿ ಸರಿಯಾಗ್ತಾ ಇಲ್ಲ. ಪರೀಕ್ಷೆಗಳು ಸರಿ ಆಗುತ್ತಿಲ್ಲ, ಅಂಗನವಾಡಿಯವರಿಗೆ ಸಂಬಳ ಸಿಕ್ಕಿಲ್ಲ. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸರಿಯಾಗಿ ಸಿಗುತ್ತಿಲ್ಲ. ರಾಜ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದ್ಯಾವುದಕ್ಕೂ ಸರ್ಕಾರದ ಮಂತ್ರಿಗಳು ಲಕ್ಷ್ಯ ಕೊಡುತ್ತಿಲ್ಲ. ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ ಬಡಿದಾಟ ಇದೆ ಎಂದು ಹೇಳಿದರು.

Leave a Reply

Your email address will not be published. Required fields are marked *