Thursday, 15th May 2025

ಪಾವಗಡದ ಕಿರಿಯ ವಕೀಲರುಗಳಿಗೆ ದಿನಸಿ ಕಿಟ್‍ ವಿತರಣೆ

ಪಾವಗಡ: ಪಾವಗಡ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಲಾಕ್‍ಡೌನ್ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೆ ಒಳಗಾದ ತಾಲ್ಲೂಕಿನ ಆಯ್ದ ವಕೀಲರುಗಳಿಗೆ ದವಸ ಧಾನ್ಯದ ಕಿಟ್‍ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನ್ಯಾಯಾಧೀಶ ವಿ.ಹನುಮಂತಪ್ಪ ಮಾತನಾಡಿ, ಕಳೆದ ವಾರ ನಾನು ಮತ್ತು ವಕೀಲರ ಸಂಘದ ಅಧ್ಯಕ್ಷರು, ಎ.ಪಿ.ಪಿ. ಬಂದು ಶ್ರೀ ಸ್ವಾಮೀಜಿಯವರಲ್ಲಿ ವಕೀಲರ ಸಂಕಷ್ಟವನ್ನು ವಿವರಿಸಿ ದಾಗ ತತ್‍ಕ್ಷಣ ಸ್ವಾಮೀಜಿ ಯವರು ಸ್ಪಂದಿಸಿ, ತಾವು ವಕೀಲರ ಸಂಕಷ್ಟದಲ್ಲಿ ಭಾಗಿಯಾಗಿ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದ್ದನ್ನು ಬಹಳ ಅಭಿಮಾನದಿಂದ ಸ್ಮರಿಸಿದರು.
ಕಳೆದ ವರ್ಷವೂ ಇಂತಹುದೇ ಸಂದರ್ಭದಲ್ಲಿ ವಕೀಲರ ಸಂಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ಸಹಾಯ ಮತ್ತು ದವಸ ಧಾನ್ಯದ ಸಹಾಯ ದೊರಕಿಸಿದ್ದನ್ನು ತುಂಬಾ ಕೃತಜ್ಞತೆಯಿಂದ ಸ್ಮರಿಸಿದರು.  ಸ್ವಾಮೀಜಿಯವರ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಡವರು, ಬಲ್ಲಿದರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನ ನ್ಯಾಯಾಧೀಶರಾದ  ಜಗದೀಶ್ ಬಿಸೆರೊಟ್ಟಿ ರವರು ಕರ್ನಾಟಕ ಸರ್ಕಾರ ಹೊರಡಿಸಿ ರುವ ಲಸಿಕಾ ಕಾರ್ಯಕ್ರಮದ ಆದೇಶವನ್ನು ವಿವರಿಸಿ ಅದರಲ್ಲಿ ಆದ್ಯತೆಯ ಮೇರೆಗೆ ವಕೀಲರನ್ನು ಒಳಪಡಿಸಿರುತ್ತಾರೆ. ವಕೀಲರು ತಪ್ಪದೇ ಲಸಿಕೆಯನ್ನು ಪಡೆಯ ಬೇಕೆಂದು ಸೂಚಿಸಿದರು. ಅಪರ ನ್ಯಾಯಾಧೀಶರಾದ  ಭರತ್ ವೈ ಕರಗುದರಿ ರವರು ವಕೀಲರು ತಂಡಗಳನ್ನು ರಚಿಸಿಕೊಂಡು ಪಟ್ಟಣದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕೊರೊನಾ ರೋಗದ ಬಗ್ಗೆ ಅರಿವು ಮೂಡಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರೇರೇಪಿಸಬೇಕೆಂದು, ಕೋವಿಡ್ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗ ಬೇಕೆಂದು ಕೋರಿದರು.
ವಕೀಲರ ಸಂಘದ ಅಧ್ಯಕ್ಷರಾದ  ಆಂಜನೇಯಲು  ಸರ್ಕಾರಿ ಸಹಾಯಕ ಅಭಿಯೋಜಕ ವಿ.ಮಂಜುನಾಥ, ವಕೀಲರಾದ  ಎಂ.ಭಗವಂತಪ್ಪ, ಯಜ್ಞನಾರಾಯಣ ಶರ್ಮ ಮತ್ತು ಆಶ್ರಮದ ಹಿತೈಷಿಗಳಾದ ಜಿ.ಸುದೇಶ್ ಬಾಬು, ವಿವೇಕ ಬ್ರಿಗೇಡಿನ  ಲೋಕೇಶ್, ದೇವರಾಜ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *