Monday, 12th May 2025

Flower and Fruits Price: ವಿಜಯದಶಮಿಗೆ ಕೌಂಟ್ ಡೌನ್ ಆರಂಭ; ಹಬ್ಬಕ್ಕೆ ಹೂವು-ಹಣ್ಣು ಬಲು ದುಬಾರಿ!

ಬೆಂಗಳೂರು: ವಿಜಯದಶಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ತರಕಾರಿ ಬೆಲೆ ಗಗನಕ್ಕೇರಿರುವ ನಡುವೆ ಹೂವು-ಹಣ್ಣು (Flower and Fruits Price) ಕೂಡ ದುಬಾರಿಯಾಗಿದ್ದು, ಮಳಿಗೆಗಳಲ್ಲಿ ಬೆಲೆ ಕೇಳಿ ಗ್ರಾಹಕರು ಗಾಬರಿಯಾಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಕನಕಾಂಬರ ಕೆಜಿಗೆ 2000 ರೂ. ಗಡಿ ದಾಟಿದ್ದು, ಮಲ್ಲಿಗೆ ಕೆಜಿಗೆ 1000 ರೂ. ಮಾರಾಟವಾಗುತ್ತಿದೆ. ಇನ್ನು ಆಯುಧ ಪೂಜೆ ಹಿನ್ನೆಲೆಯಲ್ಲಿ ಬಾಳೆ ಕಂಬ, ಬೂದು ಕುಂಬಳಕಾಯಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಅವುಗಳ ಬೆಲೆಯೂ ಭಾರಿ ಹೆಚ್ಚಾಗಿದೆ.

ಹೂವಿನ ಬೆಲೆ ಹೇಗಿದೆ?
ಮಾರುಕಟ್ಟೆಯಲ್ಲಿ ಬುಧವಾರ ಕನಕಾಂಬರ ಕೆಜಿಗೆ 2000 ರೂ. ಇದ್ದು, ಮಲ್ಲಿಗೆ ಹೂ 1000 ರೂ., ಗುಲಾಬಿ 500 ರೂ., ಸೇವಂತಿಗೆ 450 ರೂ., ಸುಗಂಧರಾಜ 300 ರೂ., ಚೆಂಡು ಹೂ 150, ಕಾಕಡ 800, ದುಂಡು ಮಲ್ಲಿಗೆ 800 ರಿಂದ 200 ರೂ. ಕಮಲ ಜೋಡಿಗೆ 70ರೂ ಇದೆ.

ಹಣ್ಣುಗಳ ಬೆಲೆಯಲ್ಲೂ ಏರಿಕೆ
ಸೇಬು ಕೆಜಿಗೆ 120 ರಿಂದ 150ರೂ., ದಾಳಿಂಬೆ 250 ರೂ., ಏಲಕ್ಕಿ ಬಾಳೆ ಹಣ್ಣು 120 ರೂ., ಸೀತಾಫಲ 180 ರಿಂದ 140 ರೂ. ಸಪೋಟ 200 ರೂ. ದ್ರಾಕ್ಷಿ 180 ರಿಂದ 200 ರೂ. ಅನಾನಸ್ ಎರಡಕ್ಕೆ 50-100 ರೂ., ಕಿತ್ತಳೆ 50 ರಿಂದ 90 ರೂ. ಮೂಸಂಬಿ 70 ರೂ ಇದೆ.

ಇಂದಿನ ತರಕಾರಿ ಬೆಲೆ (ರೂ.ಗಳಲ್ಲಿ)

  • ನಾಟಿ ಬೀನ್ಸ್‌- 160
  • ಟೊಮ್ಯಾಟೊ-80
  • ಬಳಿ ಬದನೆ- 40
  • ಮೆಣಸಿನ ಕಾಯಿ-60
  • ಊಟಿ ಕ್ಯಾರೆಟ್‌-80
  • ನುಗ್ಗೆ ಕಾಯಿ – 120
  • ನವಿಲು ಕೋಸು-40
  • ಮೂಲಂಗಿ-30
  • ಹೀರೇಕಾಯಿ-60
  • ಆಲೂಗಡ್ಡೆ-40
  • ಈರುಳ್ಳಿ-40
  • ಕ್ಯಾಪ್ಸಿಕಂ-45
  • ಹಾಗಲಕಾಯಿ-45
  • ಕೊತ್ತಂಬರಿ ಕಟ್ಟು -60
  • ಶುಂಠಿ-160
  • ಬೆಳ್ಳುಳ್ಳಿ-320
  • ನಾಟಿ ಬಟಾಣಿ-240
  • ಫಾರಂ ಬಟಾಣಿ-160

ಈ ಸುದ್ದಿಯನ್ನೂ ಓದಿ | Health Tips: ಸದಾ ಆರೋಗ್ಯವಾಗಿರಬೇಕೆ? ಹಾಗಾದ್ರೆ ವೈದ್ಯರು ಹೇಳಿದ ಈ ಸಲಹೆಗಳನ್ನು ಪಾಲಿಸಿ!

ಟೊಮ್ಯಟೊ ಬೆಲೆಯಲ್ಲಿ ಬಾರಿ ಏರಿಕೆ
ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ 80ರ ಗಡಿ ಮುಟ್ಟಿದೆ. ಪ್ರತಿವರ್ಷ ಕೋಲಾರ, ಹೊಸಕೋಟೆ ಸೇರಿ ವಿವಿಧೆಡೆಯಿಂದ ಟೊಮ್ಯಾಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಆದರೆ ಈ ವರ್ಷ ಹೆಚ್ಚು ಮಳೆಯಾಗಿರುವ ಪರಿಣಾಮ ಈ ಭಾಗದಲ್ಲಿ ಟೊಮ್ಯಾಟೊ ಬೆಳೆ ಕಡಿಮೆಯಾಗಿದೆ. ಸದ್ಯ ಹೋಲ್ ಸೇಲ್‌ನಲ್ಲಿ 1 ಕೆಜಿ ಟೊಮ್ಯಾಟೊ ಬೆಲೆ‌ 50 ರಿಂದ 60 ರೂಪಾಯಿ ಇದ್ದರೆ, ರಿಟೈಲ್‌ನಲ್ಲಿ 80 ರಿಂದ 90 ರವರೆಗೂ ದರ ನಿಗದಿ ಮಾಡಲಾಗಿದೆ.