Saturday, 10th May 2025

Flare Dress Fashion: ಎವರ್ ಗ್ರೀನ್ ವಿನ್ಯಾಸದ ಫ್ಯಾಷನ್ ಲಿಸ್ಟ್‌ನಲ್ಲಿ ಫ್ಲೇರ್ ಡ್ರೆಸ್‌ಗಳು

Flare Dress Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಲೇರ್ ಉಡುಗೆಗಳ ಫ್ಯಾಷನ್ (Flare Dress Fashion), ಈ ಸೀಸನ್‌ಗೆ ತಕ್ಕಂತೆ ನಯಾ ವಿನ್ಯಾಸದಲ್ಲಿ ವೆಸ್ಟರ್ನ್ ಹಾಗೂ ಎಥ್ನಿಕ್ ಉಡುಗೆಗಳಲ್ಲಿ ಮತ್ತೊಮ್ಮೆ ಎಂಟ್ರಿ ನೀಡಿದೆ.

ಚಿತ್ರಕೃಪೆ: ಪಿಕ್ಸೆಲ್

ಉಡುಗೆಯ ಫ್ಲೇರ್ ವಿನ್ಯಾಸ

ಹೌದು. ಧರಿಸಿದಾಗ, ತಿರುಗಿದಾಗ ಜತೆಜತೆಗೆ ಸುತ್ತುವ ಆಕರ್ಷಕ ಸಿಂಪಲ್ ಉಡುಗೆಯ ಡಿಸೈನ್ ಇದು. ನೋಡಲು ಮನಮೋಹಕವಾಗಿ ಕಾಣುವ ಎಥ್ನಿಕ್ ಉಡುಪುಗಳ ಬೆಸ್ಟ್ ಡಿಸೈನ್ ಕಾನ್ಸೆಪ್ಟ್. ಎವರ್‌ಗ್ರೀನ್ ಕಾನ್ಸೆಪ್ಟ್ ಇದು. ನೋಡಲು ಸಿಂಪಲ್ ಆಗಿ ಕಾಣುವ ಈ ವಿನ್ಯಾಸ ಮಲ್ಟಿ ಕಟ್ಸ್ ಹಾಗೂ ಸ್ಟಿಚ್ ಹೊಂದಿರುತ್ತವೆ.

ಫ್ಲೇರ್ ಉಡುಗೆಯ ಆಕರ್ಷಣೆ

ಫ್ಲೇರ್ ಡಿಸೈನವೇರ್‌ಗಳು ಎಲ್ಲಾ ವರ್ಗದ ಹುಡುಗಿಯರನ್ನು, ಮಹಿಳೆಯರನ್ನು ಸೆಳೆದಿವೆ. ಕಾರಣ ಇವುಗಳ ಸ್ಟಿಚ್ಚಿಂಗ್ ಹಾಗೂ ಕಟ್ಸ್ ಕಾನ್ಸೆಪ್ಟ್. ಲಾಂಗ್ ಗೌನ್‌ನಿಂದಿಡಿದು, ಗಾಗ್ರವರೆಗೆ, ಸಲ್ವಾರ್-ಚೂಡಿದಾರ್‌ವರೆಗೂ ಈ ಡಿಸೈನ್ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಯನ್.

ಫ್ಲೇರ್ ಉಡುಗೆಯ ಫ್ಯಾಬ್ರಿಕ್ ಸೆಲೆಕ್ಷನ್ ಹೀಗಿರಲಿ

ಯಾವುದೇ ಶೈಲಿಯ ಫ್ಲೇರ್ ಉಡುಪುಗಳ ಆಯ್ಕೆ ಮಾಡುವುದಾದಲ್ಲಿ ಮೊದಲು ಫ್ಯಾಬ್ರಿಕ್‌ನತ್ತ ಗಮನಹರಿಸಿ. ಇಲ್ಲವಾದಲ್ಲಿ ಧರಿಸಿದಾಗ ಇಡೀ ಫ್ಲೇರ್ ಡಿಸೈನರ್‌ವೇರ್ ನೀವಂದುಕೊಂಡಂತೆ ಕಾಣದು. ರೆಡಿಮೇಡ್ ಆದಲ್ಲಿ ಟ್ರಯಲ್ ನೋಡದೇ ಕೊಳ್ಳಬೇಡಿ. ಫಿಟ್ಟಿಂಗ್ ಪರ್ಫೆಕ್ಟ್ ಇದ್ದಲ್ಲಿ ಆಕರ್ಷಕವಾಗಿ ಕಾಣಿಸುತ್ತದೆ. ಇವು ತಕ್ಷಣಕ್ಕೆ ನೋಡಲು ಅಂಬ್ರೆಲ್ಲಾ ಡಿಸೈನ್‌ನಂತೆ ಕಾಣಿಸುತ್ತವೆ. ಸಾಕಷ್ಟು ಸ್ಟಿಚ್ಚಿಂಗ್ ಹೊಂದಿರುತ್ತವೆ. ಹೊಲೆಸುವುದಾದರೂ ಅಷ್ಟೇ, ನಿಮ್ಮ ಬಿಎಂಐಗೆ ತಕ್ಕಂತೆ ಹೊಲೆಸಿ ಎನ್ನುತ್ತಾರೆ ಮಾಡೆಲ್ ದಿಯಾ.

ಸಲ್ವಾರ್ ಡಿಸೈನ್ ಮಾಡಿಸುವುದಾದಲ್ಲಿ

ಸಲ್ವಾರ್‌ನಲ್ಲಿ ಫುಲ್ ಫ್ಲೇರ್ ಇರುವಂತದ್ದನ್ನು ಕೊಳ್ಳಿ. ಸಲ್ವಾರ್ ಮೆಟೀರಿಯಲ್ ಸಾಫ್ಟ್ ಆಗಿದ್ದರೇ ಒಳಿತು. ಅದರಲ್ಲೂ ಜಾರ್ಜೆಟ್ ಹಾಗೂ ಕ್ರೇಪ್ ಮೆಟೀರಿಯಲ್‌ನದ್ದು ಮಾತ್ರ ಫ್ಲೇರ್ ವಿನ್ಯಾಸಕ್ಕೆ ಸೂಟ್ ಆಗುತ್ತದೆ. ಆಗ ಫ್ಲೇರ್ ನೋಡಲು ಚೆನ್ನಾಗಿ ಕಾಣಿಸುತ್ತವೆ. ಅಲ್ಲದೇ, ದೇಹದ ಮೇಲೆ ಫ್ಲೋ ಆಗುತ್ತವೆ. ಇಲ್ಲವಾದಲ್ಲಿ ಚೆನ್ನಾಗಿ ಕಾಣುವುದಿಲ್ಲ. ದುಪಟ್ಟಾ ಕೂಡ ಮ್ಯಾಚ್ ಆಗಬೇಕು. ಇದಕ್ಕೆ ದಪ್ಪನೆಯ ಮೆಟೀರಿಯಲ್‌ನದ್ದು ಬೇಡವೇ ಬೇಡ ಎಂಬುದು ಡಿಸೈನರ್ ದಿಯಾ ಅವರ ಅಭಿಪ್ರಾಯ.

ಕಲರ್ ಆಯ್ಕೆ ಹೀಗಿರಲಿ

ಮಾನೋಕ್ರೋಮ್ ಶೇಡ್ಸ್ ಫ್ಲೇರ್ ಡ್ರೆಸ್‌ನ ಸೌಂದರ್ಯ ಹೆಚ್ಚಿಸುತ್ತವೆ. ಇನ್ನು ಡಬಲ್ ಶೇಡ್ಸ್ ಸೂಟ್ ಮಾಡಬೇಕಿದ್ದಲ್ಲಿ ಟ್ರೆಂಡಿಯಾಗಿರುವ ಕಲರ್‌ನದ್ದು ಚೂಸ್ ಮಾಡಿ. ಫ್ಲೋರಲ್ ಡಿಸೈನ್‌ನವು ಚೆನ್ನಾಗಿ ಕಾಣಿಸುತ್ತವೆ. ಇನ್ನು, ವೈಡ್-ಲಾಂಗ್ ಫ್ಲೇರ್ ಉಡುಪುಗಳು ಅಗಲವಾಗಿದ್ದಷ್ಟು ನೋಡಲು ಸುಂದರವಾಗಿ ಕಾಣುತ್ತವೆ ಎನ್ನುತ್ತಾರೆ ಡಿಸೈನರ್ ರಕ್ಷಾ.

ಈ ಸುದ್ದಿಯನ್ನೂ ಓದಿ | Celebrities Christmas Fashion 2024: ಹೀಗಿತ್ತು ಸೆಲೆಬ್ರೆಟಿಗಳ ಕ್ರಿಸ್‌ಮಸ್ ಫ್ಯಾಷನ್ ವೇರ್ಸ್

ಫ್ಲೇರ್ ಡ್ರೆಸ್ ಟಿಪ್ಸ್

  • ಫ್ಲೋರಲ್ ವಿನ್ಯಾಸದವು ಯಂಗ್ ಲುಕ್ ನೀಡುತ್ತವೆ.
  • ಬಾರ್ಡರ್‌ನದ್ದಾದಲ್ಲಿ ಬಾಡಿ ಫಿಟ್ ಇರಲಿ.
  • ಆದಷ್ಟು ಫಿಟ್ಟಿಂಗ್ ಪರ್ಫೆಕ್ಟ್ ಇದ್ದರೇ ಚೆನ್ನ.
  • ನೆಕ್‌ಲೈನ್ ಅಗಲವಾಗಿರಲಿ.
  • ಅಂದವಾದ ಹೇರ್‌ಸ್ಟೈಲ್ ಮತ್ತಷ್ಟು ಮೆರುಗು ನೀಡುತ್ತದೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)