Wednesday, 14th May 2025

ಹರಪನಹಳ್ಳಿಯಲ್ಲಿ ಯುವ ಇಂಜಿನಿಯರ್ ಆತ್ಮಹತ್ಯೆ

ವಿಜಯನಗರ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಇಂಜಿನಿಯರ್ ಹರಪನಹಳ್ಳಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹರಪನಹಳ್ಳಿ ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಜಿ.ಉಮೇಶ ಅವರ ಕಿರಿಯ ಪುತ್ರ ಜಿ.ಪ್ರಜ್ವಲ್ (23) ಮೃತ ದುರ್ದೈವಿ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿಕೊಂಡು ಬೆಂಗಳೂರಿನ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ನಾಲ್ಕು ದಿನಗಳ ಹಿಂದಷ್ಟೆ ಹರಪನಹಳ್ಳಿ ಪಟ್ಟಣದ ಆಚಾರ್ಯ ಬಡಾವಣೆಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದ. ಆತ್ಮ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.