Saturday, 10th May 2025

Drowned: ದೀಪಾವಳಿಯಂದೇ ಬಾಳಿಗೆ ಕತ್ತಲು, ಈಜಲು ಹೋಗಿ ಮುಳುಗಿ ಇಬ್ಬರು ಸಾವು

drowned

ತುಮಕೂರು: ಬಾವಿಯಲ್ಲಿ ಈಜಾಡಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ (Drowned) ಸಾವನ್ನಪ್ಪಿದ ಘಟನೆ ತುಮಕೂರು (tumkur news) ನಗರದ ಹೊರವಲಯದ ಬೆಳಗುಂಬ ಬಳಿ ಇಂದು(ಶುಕ್ರವಾರ) ನಡೆದಿದೆ. ಯಶವಂತ (17), ಮೊಹಮ್ಮದ್ ಸುಹೇಲ್ (17) ಸಾವನ್ನಪ್ಪಿದ ಯುವಕರು.

ತುಮಕೂರು ಹೊರವಲಯದ ಬೆಳಗುಂಬ ತಾಂಡ್ಯದ ವಾಸಿ ಶ್ರೀನಿವಾಸ್‌ನ ಮಗ ಯಶವಂತ್ ಹಾಗೂ ವಡ್ಡರಹಳ್ಳಿ ಗ್ರಾಮದ ವಾಸಿ ಬಾಬಾ ಜಾನ್‌ನ ಮಗ ಮೊಹಮ್ಮದ್ ಸುಹೇಲ್ ಮಳುಗಿ ಮೃತಪಟ್ಟವರು.

ತುಮಕೂರು ಹೊರವಲಯದ ಬೆಳಗುಂಬ ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ಬಾವಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮಸ್ಥರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶವಗಳನ್ನ ಹೊರತೆಗೆದಿದ್ದಾರೆ. ಶವ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.