Sunday, 11th May 2025

Doggy Christmas Fashion: ಕ್ರಿಸ್‌ಮಸ್ ಸೀಸನ್‌ನಲ್ಲಿ ಶ್ವಾನಗಳಿಗೂ ಬಂತು ವಿಂಟರ್‌ವೇರ್ಸ್

Doggy Christmas Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ಗೆ, ಮನೆಯ ಮುದ್ದಿನ ನಾಯಿಮರಿಗಳ ಸಿಂಗಾರಕ್ಕೆ ನಾನಾ ಬಗೆಯ ಕ್ಯೂಟ್ ಫ್ಯಾಷನ್‌ವೇರ್‌ಗಳು (Doggy Christmas Fashion) ಹಾಗೂ ಆಕ್ಸೆಸರೀಸ್‌ಗಳು ಆಗಮಿಸಿವೆ. ಪೆಟ್ ಆಪ್‌ಗಳಲ್ಲಿ ಹಾಗೂ ಆನ್‌ಲೈನ್ ಶಾಪ್‌ಗಳಲ್ಲಿ ಈಗಾಗಲೇ ಈ ಫ್ಯಾಷನ್‌ವೇರ್‌ಗಳು ಲಗ್ಗೆ ಇಟ್ಟಿದ್ದು, ಸಾಕುಪ್ರಾಣಿ ಪ್ರಿಯರನ್ನು ಸೆಳೆದಿವೆ. ಕ್ರಿಸ್‌ಮಸ್ ಆಚರಿಸುವವರು, ಆಚರಿಸದಿರುವವರೂ ಕೂಡ ಈ ಪೆಟ್ ಕ್ರಿಸ್‌ಮಸ್ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳನ್ನು ಖರೀದಿಸಲಾರಂಭಿಸಿದ್ದಾರೆ. ಈ ಸಾಲಿನಲ್ಲಿ ಇವುಗಳ ಖರೀದಿ ಕೊಂಚ ಮೊದಲೇ ಆರಂಭವಾಗಿದೆ ಎನ್ನುತ್ತಾರೆ ಪೆಟ್ ಶಾಪ್‌ವೊಂದರ ಮ್ಯಾನೇಜರ್.

ಚಿತ್ರಕೃಪೆ: ಪಿಕ್ಸೆಲ್

ಶ್ವಾನಗಳ ಕ್ರಿಸ್‌ಮಸ್ ಫ್ಯಾಷನ್‌ವೇರ್ಸ್

ಅಂದಹಾಗೆ, ಈ ಬಾರಿ ಶ್ವಾನಗಳ ಕ್ರಿಸ್‌ಮಸ್ ಫ್ಯಾಷನ್‌ವೇರ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಔಟ್‌ಫಿಟ್‌ಗಳು ಬಂದಿವೆ. ಅವುಗಳಲ್ಲಿ ದೇಹವನ್ನು ಬೆಚ್ಚಗಿಡುವ ಫ್ಯಾಬ್ರಿಕ್‌ಗಳಾದ ವೆಲ್ವೆಟ್ ಹಾಗೂ ಫರ್ನಲ್ಲಿ ಪಫರ್ ಜಾಕೆಟ್, ಎರಡು ಶೈಲಿಯಲ್ಲಿ ಹಾಕಬಹುದಾದ ವೈಬ್ರೆಂಟ್ ಕಲರ್‌ನ ರಿವರ್ಸಿಬಲ್ ಡಾಗ್ ಜಾಕೆಟ್, ಪೆಟ್ ಸ್ವೆಟರ್, ಕ್ವಿಲ್ಟೆಡ್ ಡಾಗ್ ಜಾಕೆಟ್, ನಿಟ್ ಡಾಗ್ ಸ್ವೆಟರ್ಸ್, ರೆಡ್ ಶೇಡ್‌ನ ಸ್ನಗ್ಮಲರ್ಸ್ ಡಾಗ್ ಜಾಕೆಟ್, ಕ್ರಿಸ್‌ಮಸ್ ಸ್ನೋ ಫ್ಲೇಕ್ ಡಾಗ್ ಸ್ವೆಟರ್, ಕ್ಯಾಪ್‌ನಂತೆ ಕಾಣಿಸುವ ಡಾಗ್ ಹೂಡಿಗಳು ಆಗಮಿಸಿವೆ.

ಶ್ವಾನಗಳ ಕ್ರಿಸ್‌ಮಸ್ ಆಕ್ಸೆಸರೀಸ್

ಕ್ರಿಸ್‌ಮಸ್ ಫೆಸ್ಟಿವ್ ಸೀಸನ್ ಕಲರ್‌ಗಳಾದ ರೆಡ್ ಹಾಗೂ ಸ್ನೋ ವೈಟ್ ಶೇಡ್‌ನ ಸ್ಟ್ರೈಪ್ಸ್ ಬೆಲ್ಟ್, ರೆಡ್ ಕಲರ್‌ನ ಬೋ, ಸಾಕ್ಸ್, ನೇಮ್ ಪೆಂಡೆಂಟ್ ಸೇರಿದಂತೆ ನಾನಾ ಬಗೆಯ ಆಕ್ಸೇಸರೀಸ್‌ಗಳು ಪೆಟ್ ಶಾಪ್‌ಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಪೆಟ್ ಲವರ್ ಶಾನ್ವಿ.

ಇನ್ನು, ಸಾಂತಾ ಲುಕ್ ನೀಡುವ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಬಿಕರಿಯಾಗುತ್ತಿವೆ. ಸಾಂತಾ ಕ್ಯಾಪ್ ಕೂಡ ಹೆಚ್ಚು ಬೇಡಿಕೆ ಪಡೆದಿವೆ ಎನ್ನುತ್ತಾರೆ ಮಾರಾಟಗಾರರು.

ಈ ಸುದ್ದಿಯನ್ನೂ ಓದಿ | Karnataka Weather: ರಾಜ್ಯದಲ್ಲಿ ಮೈ ಕೊರೆಯುವ ಚಳಿ; ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆ. ದಾಖಲು!

ಶ್ವಾನಕ್ಕೆ ಕ್ರಿಸ್‌ಮಸ್ ಔಟ್‌ಫಿಟ್ಸ್ ಶಾಪಿಂಗ್‌ಗೆ ಸಿಂಪಲ್ ಸಲಹೆ

  • ರೆಡ್ ಶೇಡ್‌ನವನ್ನು ಆಯ್ಕೆ ಮಾಡಿ.
  • ಸಾಂತಾ ಸೆಟ್ ಕೂಡ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ.
  • ಸೀಸನ್ ಟ್ರೆಂಡ್‌ನಲ್ಲಿ ಇದೆಯೇ ಎಂಬುದನ್ನು ಗಮನಿಸಿ.
  • ಆಫರ್ ಬಗ್ಗೆ ಚೆಕ್ ಮಾಡಿ.
  • ನಿರ್ವಹಣೆ ಹೇಗೆ? ಎಂಬುದನ್ನು ತಿಳಿದುಕೊಳ್ಳಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)