Tuesday, 13th May 2025

ಕೆಳಮಟ್ಟದ ರಾಜಕೀಯ ನಡೆಸುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ: ಶಾಸಕ ಸಿದ್ದು ಸವದಿ

ಬನಹಟ್ಟಿ: ಮಹಿಳೆಯರ ಬಗ್ಗೆ ಗೌರವವಿದೆ. ಮಹಿಳಾ ಸದಸ್ಯರನ್ನು ಎಳೆದಾಡಿ, ಅಸಭ್ಯ ವರ್ತನೆ ನಡೆಸಿಲ್ಲ. ಬಹುಮತವಿರುವ ಬಿಜೆಪಿ ಸದಸ್ಯರು ನಮ್ಮವರು ವಿನಾಕಾರಣ ಅವರಿಗೆ ಆಮಿಷವೊಡ್ಡಿ ಕಿಡ್ನಾಪ್‌ ಮಾಡುವ ನೀಚ ರಾಜಕಾರಣವನ್ನು ಕಾಂಗ್ರೆಸ್‌
ನಡೆಸುತ್ತಿದೆ. ಹಕ್ಕು ಮಂಡನೆಗೆ ಅವಕಾಶ ನೀಡಿಲ್ಲವೆಂದು ಮಾಜಿ ಸಚಿವೆ ಉಮಾಶ್ರೀಯವರ ಹೇಳಿಕೆ ಶುದ್ಧ ಸುಳ್ಳು. ಅಂತಹ
ಕೆಳಮಟ್ಟದ ರಾಜಕೀಯ ನಡೆಸುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ರಬಕವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಲಿಂಗಪುರ ಪುರಸಭೆಯಲ್ಲಿ ಬಹುಮತವಿದ್ದರೂ ಕಾಂಗ್ರೆಸ್‌ ವಾಮಮಾರ್ಗದಿಂದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯಬೇಕೆಂಬ ಹುನ್ನಾರ ನಡೆಸಿರುವುದು ಜನತೆಗೆ ಅರಿ ವಾಗಿದೆ. ರಾತ್ರೋ ರಾತ್ರೀ ಸದಸ್ಯರನ್ನು ಕಿಡ್ನಾಪ್ ಮಾಡಿದ್ದಲ್ಲದೆ, ಉಮಾಶ್ರೀಯವರೇ ಮಹಿಳೆಯರ ಮೇಲೆ ಅಗೌರವ ತರುವ ರೀತಿಯಲ್ಲಿ ವರ್ತನೆ ನಡೆಸಿದ್ದಾರೆಂದು ಸವದಿ ಹೇಳಿದರು.

ನಿರೀಕ್ಷಿತ ಗೆಲುವು: ರಾಜ್ಯದ ಶಿರಾ ಹಾಗೂ ರಾಜ ರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಪಡೆದು ಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಕಾರ್ಯ ಹಾಗೂ ಪ್ರಾಮಾಣಿಕ ಅಧಿಕಾರಕ್ಕೆ ಜನತೆ ಗೆಲುವಿನೊಂದಿಗೆ ಸಂದೇಶ ನೀಡಿದ್ದಾರೆಂದು ತಿಳಿಸಿದರು.

ಬಿಹಾರ ರಾಜ್ಯದಲ್ಲಿ ಎನ್‌ಡಿಎಗೆ ಮತದಾರರು ಅಧಿಕಾರಕ್ಕೆ ಅವಕಾಶ ಕಲ್ಪಿಸಿ ಕೊಡುವ ಮೂಲಕ ಬಿಜೆಪಿಯ ಜನಪ್ರಿಯ ಯೋಜನೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಜನತೆ ಆಶೀರ್ವಾದ ಮಾಡಿದ್ದಾರೆಂದು ತಿಳಿಸಿದರು.

Leave a Reply

Your email address will not be published. Required fields are marked *