Sunday, 11th May 2025

ಗ್ರಾ.ಪಂ ಚುನಾವಣೆ ಹೊತ್ತಿನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರಿಂದ ಆಮಿಷ

ಬೆಂಗಳೂರು: ಪ್ರತಿ ಗ್ರಾಮ ಪಂಚಾಯತಿಗೆ 1.50 ಕೋಟಿ ಅನುದಾನವನ್ನು ನೇರವಾಗಿ ನೀಡಲಾಗುವುದು ಹಾಗೂ ನರೇಗಾ ಯೋಜನೆಯನ್ನು ನೇರವಾಗಿ ನೀಡಲಾಗುವುದು ಎಂದು ಆಮಿಷ ಒಡ್ಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಚುನಾವಣೆ ಘೋಷಣೆಯಾಗಿರುವ ಬಗ್ಗೆ ಕನಿಷ್ಠ ಜ್ಞಾನವಿಲ್ಲವೇ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ತಿಳಿಸಿದರು.

ಗುರುವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಇಷ್ಟು ದಿನ ಗ್ರಾಮಗಳ ಬಗ್ಗೆ ಮಾತನ್ನೇ ಆಡದ ನೀವು ಈಗ “ಗ್ರಾಮ ಸ್ವರಾಜ್ಯ” ಎನ್ನುವ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯಗಳಿಗೆ ಮಸಿ ಬಳಿಯುತ್ತಿದ್ದೀರಿ. ಚುನಾವಣೆ ಹೊತ್ತಿನಲ್ಲೇ ನಿಮಗೆ ಗ್ರಾಮಗಳ ನೆಪಪಾದವೇ? ಇಷ್ಟು ದಿನ ನಾಪತ್ತೆಯಾಗಿದ್ದ ನೀವು ದಿಡೀರ್ ಎಂದು ಪ್ರತ್ಯಕ್ಷವಾಗಿ ಸುಮ್ಮನೆ ಬಡಬಡಾ ಯಿಸುವುದನ್ನು ನಿಲ್ಲಿಸಿ ಎಂದು ಹೇಳಿದರು.

ಈ ಮೊದಲು ಕರ್ನಾಟಕದಲ್ಲಿ 5 ವರ್ಷ ಸರ್ಕಾರ ನಡೆಸಿದ ನಿಮ್ಮ ಕೊಡುಗೆ ಗ್ರಾಮಗಳ ಉದ್ದಾರಕ್ಕೆ ಏನಿದೆ ಎಂಬುದನ್ನು ತಿಳಿಸಿ ಹಾಗೂ ಕಳೆದ ಒಂದು ವರ್ಷದಿಂದ ಒಂದೇ ಒಂದು ಹಳ್ಳಿಯನ್ನು ಉದ್ದಾರ ಮಾಡಿದ್ದೀರಾ ಎಂಬುದನ್ನು ತೋರಿಸಿ ಆನಂತರ ಈ ಯೋಜನೆ ಪ್ರಕಟಿಸಿ ಎಂದು ಆಮ್ ಆದ್ಮಿ ಪಕ್ಷ ನಿಮಗೆ ಸವಾಲು ಹಾಕುತ್ತದೆ‌ ಎಂದರು.

ಚುನಾವಣೆ ಹೊತ್ತಿನಲ್ಲಿ ಯೋಜನೆಗಳನ್ನು ಘೋಷಿಸಬಾರದು ಎನ್ನುವ ಕನಿಷ್ಠ ತಿಳುವಳಿಕೆ, ತಲೆಯಲ್ಲಿ ಬುದ್ದಿ ಇಲ್ಲದ ನೀವು ಜನಪ್ರತಿನಿಧಿಗಳೇ ಎಂದು ವ್ಯಂಗ್ಯವಾಡಿದರು.

ವಸಂತ್ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್ ಮಾತನಾಡಿ, ಜನಿಸಿದ ಹಳ್ಳಿಯನ್ನೇ ಉದ್ದಾರ ಮಾಡದ ನೀವು ಇನ್ನೂ ಕರ್ನಾ ಟಕದ ಸಾವಿರಾರು ಹಳ್ಳಿಗಳನ್ನು ಉದ್ದಾರ ಮಾಡುತ್ತೇನೆ ಎಂದು ಹೇಳಿರುವುದು ಹಾಸ್ಯಾಸ್ಪದ. ನಿಮ್ಮ ಜನ್ಮಸ್ಥಳವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಆನಂತರ ಇಡೀ ರಾಜ್ಯದ ಹಳ್ಳಿಗಳ ಅಭಿವೃದ್ಧಿ ಬಗ್ಗೆ ಮಾತನಾಡಲು ಯೋಗ್ಯತೆ ಬರುತ್ತದೆ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತಿಗಳಿಗೆ ದುಡ್ಡುಕೊಟ್ಟು ದೇಶದ ತಳಮಟ್ಟದಿಂದಲೇ ಭ್ರಷ್ಟಾಚಾರವನ್ನು ಹಬ್ಬಿಸುವ ನಿಮ್ಮ ಈ ನೀಚ ಬುದ್ದಿ ಯನ್ನು ಬಿಡಬೇಕು ಎಂದರು.

 

Leave a Reply

Your email address will not be published. Required fields are marked *