Wednesday, 14th May 2025

DK Shivakumar: ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಡಿ.ಕೆ. ಶಿವಕುಮಾರ್ ಭೇಟಿ, ಪೂಜೆ ಸಲ್ಲಿಕೆ

DK Shivakumar

ತಿರುವಣ್ಣಾಮಲೈ: ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುಂಚಿತವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಉತ್ತಮ ಆಡಳಿತ ಮಾಡುವ ಶಕ್ತಿ ದೊರೆಯಲಿ ಮತ್ತು ಸಮೃದ್ಧಿಯಾಗಿ ಮಳೆ ಬೀಳಲಿ ಎಂದು ಪ್ರಾರ್ಥಿಸಿದ್ದೆ. ಈ ಕಾರಣಕ್ಕೆ ಮತ್ತೆ ದೇವರ ದರ್ಶನ ಮಾಡಿದೆ. ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ತಮಿಳುನಾಡಿನ ತಿರುವಣ್ಣಾಮಲೈನ (Thiruvannamalai) ಅರುಣಾಚಲೇಶ್ವರ ದೇಗುಲಕ್ಕೆ (Arunachaleshwar Temple) ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಈ ದೇವಾಲಯ ಅತ್ಯುತ್ತಮ ವಾಸ್ತುಶಿಲ್ಪದಿಂದ ಕೂಡಿದ್ದು, ಸುಂದರವಾಗಿದೆ. ನಮ್ಮ ನೆಲದ ಶಿಲ್ಪಿಗಳು ಒಂದು ಸಾವಿರ ವರ್ಷಗಳ ಹಿಂದೆಯೇ ಅದ್ಬುತ ಕೈಚಳಕ ತೋರಿಸಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | BBH 18: ಹಿಂದಿಯಲ್ಲೂ ಶುರುವಾಯಿತು ಬಿಗ್ ಬಾಸ್: ಮನೆಯೊಳಗೆ ಕಾಲಿಟ್ಟ 18 ಸ್ಪರ್ಧಿಗಳು ಇವರೇ ನೋಡಿ

ಕಳೆದ ವರ್ಷಕ್ಕೆ ಹೋಲಿಸಿದರೆ, ದೇವಸ್ಥಾನವನ್ನು ತಮಿಳುನಾಡು ಸರ್ಕಾರ ಅತ್ಯುತ್ತಮವಾಗಿ ಅಭಿವೃದ್ಧಿಗೊಳಿಸಿದೆ. ಇದು ನನಗೆ ಹೆಚ್ಚು ಸಂತೋಷವನ್ನು ನೀಡಿತು ಎಂದು ಹೇಳಿದರು.