Sunday, 11th May 2025

ಸ್ಪೋರ್ಟ್ಸ್ ಕ್ಲಬ್ ಆಟದ ಮೈದಾನದಲ್ಲಿ ಉಲ್ಟಾ ಹಾರಿದ ರಾಷ್ಟ್ರ ಬಾವುಟ…!

ವಾಡಿ : ಎಸಿಸಿ ಕಾರ್ಖಾನೆ ವತಿಯಿಂದ ನಡೆದ ಅಮೃತ ಮಹೋತ್ಸವ ಆಚರಣೆ ಸಮಾ ರಂಭದಲ್ಲಿ ರಾಷ್ಟ್ರ ಬಾವುಟ ಉಲ್ಟಾ ಹಾರಿದ ಪ್ರಸಂಗ ನಡೆದಿದೆ.

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಕಂಪನಿಯ ಸ್ಪೋರ್ಟ್ಸ್ ಕ್ಲಬ್ ಆಟದ ಮೈದಾನದಲ್ಲಿ ಸೋಮವಾರ 75ನೇ ಸ್ವಾತಂತ್ರೋತ್ಸದಲ್ಲಿ ತ್ರೀವರ್ಣ ಧ್ವಜಾರೋಹಣ ನೆರವೇರಿಸಿದ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಜಾಗಿರದಾರ ರಾಷ್ಟ್ರಗೀತೆ ಗೂ ದನಿಯಾದರು.

ಆದರೆ ಬಾವುಟ ಉಲ್ಟಾ ಹಾರಾಡುತ್ತಿದ್ದನ್ನು ಯಾರೂ ಗಮನಿಸಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯುತ್ತಿದ್ದ ವೇಳೆ ಸಾರ್ವಜನಿಕರ ಕಣ್ಣಿಗೆ ಬಿದ್ದು ಗುಸುಗುಸು ಸುದ್ದಿ ಹಬ್ಬುತ್ತಿದ್ದಂತೆ ಎಚ್ಚೆತ್ತ ಎಸಿಸಿ ಅಧಿಕಾರಿಗಳು, ತಕ್ಷಣವೇ ಬಾವುಟ ಸರಿಪಡಿಸಲು ಮುಂದಾದರು. ಕಂಪನಿಯ ವಿವಿಧ ಘಟಕಗಳ ಮುಖ್ಯಸ್ಥರು ಹಾಗೂ ಕಾರ್ಮಿಕ ಮುಖಂಡರು, ಪೋಷಕರು ಹಾಗೂ ವಿದ್ಯಾರ್ಥಿಗಳು ಘಟನೆಗೆ ಸಾಕ್ಷಿಯಾದರು.

ಪ್ರಕರಣ ಪೊಲೀಸ್ ಠಾಣೆ ಮೂಲಕ ಮೆಟ್ಟಿಲೇರಿದ್ದು, ಪಿಎಸ್ ಐ ಮಹಾಂತೇಶ ಜಿ.ಪಾಟೀಲ ವಿಚಾರಣೆ ನಡೆಸಿದ್ದಾರೆ.