Sunday, 11th May 2025

CM Siddaramaiah: ಆದಿತ್ಯ ಠಾಕ್ರೆ ಹೇಳಿಕೆಗೆ ಸಿದ್ದರಾಮಯ್ಯ ವಿರೋಧ

CM Siddaramaiah

ಬೆಳಗಾವಿ: ಬೆಳಗಾವಿಯನ್ನು (Belagavi) ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎನ್ನುವ ಹೇಳಿಕೆ ಅತ್ಯಂತ ಬಾಲಿಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಟೀಕಿಸಿದರು. ಆದಿತ್ಯ ಠಾಕ್ರೆ ನೀಡಿದ ಹೇಳಿಕೆ ಬಗ್ಗೆ ಸುವರ್ಣಸೌಧದಲ್ಲಿ‌ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ನಮಗೆ ಮಹಾಜನ್ ವರದಿಯೇ ಅಂತಿಮ. ಮಹಾಜನ್ ವರದಿಯನ್ನು ಒಪ್ಪಿಕೊಂಡ ಮೇಲೆ ಮುಗಿಯಿತು. ಯಾರಾದ್ರೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಸಿಎಂ, ಈ ಕಾರಣಕ್ಕೇ ಇದೊಂದು ಬಾಲಿಶ ಹೇಳಿಕೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Belagavi Winter Session 2024: ಪಂಚಮಸಾಲಿ 2ಎ ಮೀಸಲಾತಿ; ಸುಪ್ರೀಂ ಕೋರ್ಟ್ ಆದೇಶ ಸದನದ ಮುಂದೆ ಮಂಡನೆ; ಸಿದ್ದರಾಮಯ್ಯ

ಎಂಇಎಸ್‌ (MES) ನವರು ಇದೇ ವಿಚಾರದಲ್ಲಿ ಪುಂಡಾಟಿಕೆ ಮಾಡಿದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾರೇ ಪುಂಡಾಟಿಕೆ ಮಾಡಿದರೂ ಸುಮ್ಮನಿರಲ್ಲ ಎಂದು ತಿಳಿಸಿದರು.