Sunday, 11th May 2025

ದಾವೋಸ್ ಪ್ರವಾಸ ಯಶಸ್ವಿ: ಮರಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಆರು ದಿನಗಳ ದಾವೋಸ್ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೊಮ್ಮಾಯಿ ಅವರನ್ನು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹಾಗೂ ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ ಅವರು ಸ್ವಾಗತ ಮಾಡಿದರು.

ಮೇ 22ರಂದು ಸಿಎಂ ಬೊಮ್ಮಾಯಿ ಸ್ವಿಟ್ಜರ್‌ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಕಳೆದ ಐದು ದಿನಗಳ ವಿಶ್ವ ಆರ್ಥಿಕ ಶೃಂಗಸಭೆ ಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಹೂಡಿಕೆದಾರರನ್ನು ಸೆಳೆದಿದ್ದರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿಬಿಟಿ ಸಚಿವ ಡಾ. ಸಿಎನ್. ಅಶ್ವತ್ಥ ನಾರಾಯಣ ಹಾಗೂ ಅಧಿಕಾರಿಗಳು ಮುಖ್ಯಮಂತ್ರಿ ಜೊತೆಗಿದ್ದರು.

ದಾವೋಸ್ ಆರ್ಥಿಕ ಶೃಂಗಸಭೆಯ ಫಲಶೃತಿ ಹಾಗೂ ರಾಜ್ಯಕ್ಕೆ ನಿಶ್ಚಯವಾದ ಬಂಡವಾಳದ ಹರಿವು ಕುರಿತು ಸಿಎಂ ಬೊಮ್ಮಾಯಿ ಮಧ್ಯಾಹ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.