-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ಗೆ (Christmas Fashion 2024) ಈಗಾಗಲೇ ವೆಸ್ಟರ್ನ್ ಲುಕ್ ನೀಡುವಂತಹ ಅತ್ಯಾಕರ್ಷಕ ಫ್ಯಾಷನ್‌ವೇರ್ಸ್, ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ. ದೊಡ್ಡ ಮಾಲ್‌ಗಳಲ್ಲಿ ಮಾತ್ರವಲ್ಲ, ರಾಜ್ಯದೆಲ್ಲೆಡೆಯ ಚಿಕ್ಕ-ಪುಟ್ಟ ಶಾಪ್‌ಗಳಲ್ಲಿ, ಶಾಪಿಂಗ್ ಸೆಂಟರ್‌ಗಳಲ್ಲಿ, ಸ್ಟ್ರೀಟ್ ಶಾಪ್‌ಗಳಲ್ಲಿ ಸೇರಿದಂತೆ ಎಲ್ಲೆಡೆ ಕ್ರಿಸ್‌ಮಸ್‌ಗೆ ಲೆಕ್ಕವಿಲ್ಲದಷ್ಟು ಬಗೆಯ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕ್ರಿಸ್‌ಮಸ್‌ಗೆ ವಿಶೇಷ ಡಿಸೈನರ್‌ವೇರ್ಸ್
ಕ್ರಿಸ್‌ಮಸ್ ಸೀಸನ್‌ನಲ್ಲಿ ಸೆಲೆಬ್ರೆಟಿ ಲುಕ್ ನೀಡುವ ಪಾರ್ಟಿವೇರ್ಸ್, ಕಂಪ್ಲೀಟ್ ವೆಸ್ಟರ್ನ್ ಟಚ್ ನೀಡುವ ಫ್ರಾಕ್ಸ್, ಫಂಕಿ ಲುಕ್ ಕಲ್ಪಿಸುವ ಕೋ ಆರ್ಡ್ ಸೂಟ್ಸ್, ರ‍್ಯಾಂಪರ್ಸ್, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್ ಗೌನ್‌ಗಳು, ಮಿಡಿ-ಮಿನಿ ಶಾರ್ಟ್ ಫ್ರಾಕ್ಸ್, ತಿರುಗಿದರೇ ಹರಡುವ ಮ್ಯಾಕ್ಸಿಗಳು, ಪಾರ್ಟಿ ಫಾರ್ಮಲ್‌ವೇರ್‌ಗಳು ಈ ಕ್ರಿಸ್‌ಮಸ್ ಹಬ್ಬದ ಸಂತಸ ಹೆಚ್ಚಿಸಲು ವೈವಿಧ್ಯಮಯ ವಿನ್ಯಾಸದಲ್ಲಿ ಆಗಮಿಸಿವೆ.

ಕ್ರಿಸ್‌ಮಸ್ ಫ್ಯಾಷನ್‌ವೇರ್ಸ್‌ಗೆ ಹೆಚ್ಚಿದ ಬೇಡಿಕೆ
ಫ್ಯಾಷನಿಸ್ಟಾ ಧನವಂತ್ರಿ ಹೇಳುವಂತೆ, ಕ್ರಿಸ್‌ಮಸ್ ಸೀಸನ್‌ನಲ್ಲಿ ಎಥ್ನಿಕ್ ಉಡುಪುಗಳು ಸೈಡಿಗೆ ಸರಿಯುತ್ತವೆ. ಇಂಡೋ-ವೆಸ್ಟರ್ನ್ ಔಟ್‌ಫಿಟ್‌ಗಳು ಹಾಗೂ ಪಾರ್ಟಿವೇರ್‌ಗಳು ಟ್ರೆಂಡಿಯಾಗುತ್ತವೆ. ಇನ್ನು, ಸಾಮಾನ್ಯವಾಗಿ ಕಾಣಿಸುವ ಸಿಂಪಲ್ ಕುರ್ತಾ, ಚೂಡಿದಾರ್, ಸಲ್ವಾರ್-ಕಮೀಝ್, ಶರಾರ, ಲೆಹೆಂಗಾ ಎಲ್ಲವೂ ಮುಂದಿನ ಫೆಸ್ಟಿವ್ ಸೀಸನ್‌ವರೆಗೂ ಮರೆಯಾಗುತ್ತವೆ.

ಕ್ರಿಸ್‌ಮಸ್ ರೆಡಿಮೇಡ್ ಫ್ಯಾಷವ್‌ವೇರ್ಸ್
ಲಾಂಗ್, ಶಾರ್ಟ್, ಸ್ಯಾಟೀನ್, ಲೇಸ್, ನೆಟ್ಟೆಡ್, ರಫಲ್ಸ್, ಕಟೌಟ್ ಗೌನ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ವಿನ್ಯಾಸದಲ್ಲಿ ಬಂದಿವೆ. ಎಲ್ಲದಕ್ಕಿಂತ ಹೆಚ್ಚಾಗಿ ರೆಡಿಮೇಡ್ ಗೌನ್‌ಗಳು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಕಮರ್ಷಿಯಲ್ ಸ್ಟ್ರೀಟ್ ಶಾಪ್‌ವೊಂದರ ಮ್ಯಾನೇಜರ್. ಅವರ ಪ್ರಕಾರ, ಕ್ರಿಸ್‌ಮಸ್ ಪಾರ್ಟಿ, ಸೆಲೆಬ್ರೆಷನ್‌ಗೆ ಹೊಂದುವಂತಹ ಗೌನ್‌ಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ. ಇನ್ನು, ಈ ಸೀಸನ್‌ನಲ್ಲಿ ನಾನಾ ಬಗೆಯ ಗ್ಲಾಮರಸ್ ಲುಕ್ ನೀಡುವ ಪಾರ್ಟಿವೇರ್‌ಗಳು ಬಂದಿವೆ. ಕ್ರಿಸ್‌ಮಸ್ ಆಚರಿಸದವರೂ ಕೂಡ ಇವನ್ನು ಕೊಳ್ಳುವುದು ಹೆಚ್ಚಾಗಿದೆ ಎನ್ನುತ್ತಾರೆ.

ಕ್ರಿಸ್‌ಮಸ್ ರೆಡಿಮೇಡ್ ಡಿಸೈನರ್‌ವೇರ್ಸ್‌ಗೆ ಆದ್ಯತೆ
ಈ ಸೀಸನ್‌ನಲ್ಲಿ ಸೆಮಿ ಸ್ಟಿಚ್ ಹಾಗೂ ಡಿಸೈನರ್‌ಗಳನ್ನು ಹೊಲೆಸುವವರು ಕಡಿಮೆಯಾಗಿದ್ದಾರೆ. ಅತ್ಯಾಕರ್ಷಕ ರೆಡಿಮೇಡ್ ಡ್ರೆಸ್‌ಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಮಾರಾಟಗಾರರು.
ಈ ಸುದ್ದಿಯನ್ನೂ ಓದಿ | Kerebete Movie: ʼಕೆರೆಬೇಟೆʼ ಚಿತ್ರದ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್!
ಹೀಗಿರಲಿ ಕ್ರಿಸ್‌ಮಸ್ ಔಟ್‌ಫಿಟ್ಸ್ ಸೆಲೆಕ್ಷನ್
- ಸೀಸನ್ ಟ್ರೆಂಡ್ ನಲ್ಲಿರುವುದನ್ನು ಚೂಸ್ ಮಾಡಿ.
- ನಯಾ ಲುಕ್ ನೀಡುವಂತವನ್ನು ಖರೀದಿಸಿ.
- ವೆಸ್ಟರ್ನ್‌ವೇರ್ಸ್‌ನಲ್ಲಿ ಸಾಕಷ್ಟು ಅಪ್ಷನ್ ಕಾಣಬಹುದು.
- ಈ ವಿಂಟರ್ ಸೀಸನ್ ಶೇಡ್‌ನವನ್ನುಆಯ್ಕೆ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)