Saturday, 10th May 2025

Christmas Dress 2024: ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾದ ಲೇಡಿಸ್ ಫ್ಯಾಷನ್ ವೇರ್‌ಗಳಿವು!

Christmas Dress 2024

-ಶೀಲಾ ಸಿ ಶೆಟ್ಟಿ, ಬೆಂಗಳೂರು

ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ನಲ್ಲಿ ವೈವಿಧ್ಯಮಯ ವೆಸ್ಟರ್ನ್ ಡ್ರೆಸ್‌ಗಳು (Christmas Dress 2024) ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ. ಕ್ರಿಸ್‌ಮಸ್ ಸೀಸನ್‌ನಲ್ಲಿಅತಿ ಹೆಚ್ಚಾಗಿ ವೆಸ್ಟರ್ನ್ ಔಟ್‌ಫಿಟ್‌ಗೆ ಹೆಚ್ಚು ಬೇಡಿಕೆ ಎನ್ನುತ್ತಾರೆ ಡಿಸೈನರ್ಸ್. ಇದಕ್ಕೆ ಪೂರಕ ಎಂಬಂತೆ ಲೆಕ್ಕವಿಲ್ಲದಷ್ಟು ಡಿಸೈನ್‌ಗಳು ಬಿಡುಗಡೆಗೊಂಡಿವೆ. ಇನ್ನು ನಮ್ಮ ರಾಷ್ಟ್ರದಲ್ಲಿಅತಿ ಹೆಚ್ಚಾಗಿ ಬೇಡಿಕೆ ಪಡೆದುಕೊಂಡಿರುವುದು ಇಂಡೋ -ವೆಸ್ಟರ್ನ್ ಶೈಲಿಯ ಡ್ರೆಸ್‌ಗಳು. ಇವು ನಮ್ಮ ಸೀಸನ್‌ಗೆ ಹಾಗೂ ಲೈಫ್‌ಸ್ಟೈಲ್‌ಗೆ ಹೊಂದಿಕೆಯಾಗುವಂತಿರುತ್ತವೆ ಎನ್ನುತ್ತಾರೆ ಡಿಸೈನರ್ಸ್. ಕ್ರಿಸ್‌ಮಸ್ ಸೀಸನ್‌ನಲ್ಲಿ ಶರ್ಟೆಡ್ ಸ್ಲೀವ್ ಡ್ರೆಸ್, ಮಲ್ಟಿ ಸ್ಲಿಟ್ ಡ್ರೆಸ್ ಹಾಗೂ ಶೈನಿಂಗ್ ಅಸೆಮ್ಮಿಟ್ರಿಕಲ್ ಡ್ರೆಸ್‌ನ ನಾನಾ ವೆರೈಟಿ ಡಿಸೈನ್‌ಗಳು ಟ್ರೆಂಡಿಯಾಗಿವೆ.

ಚಿತ್ರಕೃಪೆ: ಪಿಕ್ಸೆಲ್

ಅಂಬ್ರೆಲ್ಲಾ-ಸಿಂಡ್ರೆಲಾ ಫ್ರಾಕ್

ಅಂಬ್ರೆಲ್ಲಾ – ಸಿಂಡ್ರೆಲ್ಲಾ ಫ್ರಾಕ್‌ಗಳು, ಈ ಮುಂಬರುತ್ತಿರುವ ಫೆಸ್ಟಿವ್ ಸೀಸನ್‌ಗೂ ಮುನ್ನವೇ ಧಮಾಕ ಎಂಟ್ರಿ ನೀಡಿವೆ. ಕೇವಲ ಗೌನ್‌ಗೆ ಸೀಮಿತವಾಗಿದ್ದ ಈ ಶೈಲಿಯ ಡಿಸೈನ್ ಇದೀಗ ಫ್ರಾಕ್‌ನಲ್ಲಿ ಬಂದಿವೆ. ನೋಡಲು ತಕ್ಷಣಕ್ಕೆ ಮಿನಿ ಸಿಂಡ್ರೆಲಾ ಗೌನ್‌ಗಳಂತೆ ಕಾಣಿಸುವ ಇವು ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳ ಮನ ಸೆಳೆದಿವೆ.

ಫುಲ್ ಸ್ಲೀವ್ ಲಾಂಗ್ ಸ್ಕರ್ಟ್ಸ್ & ಮ್ಯಾಕ್ಸಿ

ಈ ವಿಂಟರ್ ಸೀಸನ್‌ಗೆ ಹೊಂದುವಂತೆ ಈಗಾಗಲೇ ನಾನಾ ಬಗೆಯ ಸ್ಲೀವ್ ಇರುವಂತಹ ಅದರಲ್ಲೂ ಫುಲ್ ಸ್ಲೀವ್ ಇರುವ ಮ್ಯಾಕ್ಸಿಗಳು ಹಾಗೂ ಲಾಂಗ್‌ ಸ್ಕರ್ಟ್‌ಗಳು ಹಾಗೂ ಸ್ಲಿಟ್ ಡ್ರೆಸ್‌ಗಳು ಪಾರ್ಟಿ ಪ್ರಿಯರ ವಾರ್ಡ್ರೋಬ್ ಸೇರಿವೆ. ಜತೆಗೆ ಲೆಕ್ಕವಿಲ್ಲದಷ್ಟು ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ. ಗ್ಲಾಮರಸ್ ಲುಕ್ ನೀಡುವ ಡಿಸೈನ್‌ನಲ್ಲಿ ಹುಡುಗಿಯರನ್ನು ಸೆಳೆದಿವೆ. ಸ್ಪ್ರೇಟ್ ಸ್ಲಿಟ್, ಕ್ರಾಸ್ ಸ್ಲಿಟ್, ಮಲ್ಟಿಪಲ್ ಸ್ಲಿಟ್ಸ್ ಹೀಗೆ ಐದಕ್ಕಿಂತ ಹೆಚ್ಚು ಬಗೆಯ ಮ್ಯಾಕ್ಸಿ ಗೌನ್ ಕಾಮನ್ ಆಗಿದೆ.

ರೆಡ್ & ವೈಟ್ ಶೇಡ್ ಔಟ್‌ಫಿಟ್‌ಗಳ ಹಂಗಾಮ

ಕ್ರಿಸ್‌ಮಸ್ ಇವ್‌ಗೆ ರೆಡ್ ಶೇಡ್ ಅಥವಾ ವೈಟ್ ಶೇಡ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇತರೆ ವರ್ಣಗಳು ಸೈಡಿಗೆ ಸರಿಯುತ್ತವೆ. ಪಾಸ್ಟೆಲ್ ಕಲರ್‌ಗಳು ಅದರಲ್ಲೂ ಶೈನಿಂಗ್ ಡಿಸೈನರ್‌ವೇರ್‌ಗಳು ಈ ಬಾರಿಯ ಕ್ರಿಸ್‌ಮಸ್ ಕಲೆಕ್ಷನ್‌ನಲ್ಲಿ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾಯ್.

ಈ ಸುದ್ದಿಯನ್ನೂ ಓದಿ | Feather Accessories Fashion: ಯುವತಿಯರನ್ನು ಸೆಳೆಯುತ್ತಿದೆ ಫಂಕಿ ಫೆದರ್ ಆಕ್ಸೆಸರೀಸ್!

ಕ್ರಿಸ್‌ಮಸ್ ಲೇಡಿಸ್‌ ವೇರ್ಸ್ ಆಯ್ಕೆ ಹೀಗಿರಲಿ

ಪ್ಲಂಪಿಯಾಗಿರುವವರು ಆದಷ್ಟೂ ಫ್ಲೋ ಆಗುವಂತಹ ಡ್ರೇಪ್ ಆಗುವಂತಹ ಔಟ್‌ಫಿಟ್ ಆಯ್ಕೆ ಮಾಡಬೇಕು. ಕಟ್ಔಟ್ಸ್ ಡ್ರೆಸ್ ಬೇಡ. ಸ್ಲಿಮ್ ಇರುವವರು ಯಾವುದೇ ಬಗೆಯವನ್ನು ಧರಿಸಬಹುದು. ದಪ್ಪಗಿರುವವರು ಆದಷ್ಟೂ ಸಾಫ್ಟ್ ಫ್ಯಾಬ್ರಿಕ್‌ನದ್ದು ಸೆಲೆಕ್ಟ್ ಮಾಡಬೇಕು. ಎ ವೇಸ್ಟ್‌ಲೈನ್ ಇದ್ದರೆ ನೋಡಲು ಫಿಟ್ಟಿಂಗ್ ಕಾಣುವುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್ ಪತ್ರಕರ್ತೆ)