Sunday, 11th May 2025

Book Release: ಬೆಂಗಳೂರಿನಲ್ಲಿ ಭಾನುವಾರ ‘ಚಂದನವನದ ಚಿಲುಮೆಗಳುʼ ಪುಸ್ತಕ ಬಿಡುಗಡೆ

Book Release

ಬೆಂಗಳೂರು: ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಮತ್ತು ಹೆಮ್ಮರ ಪ್ರಕಾಶನದಿಂದ ಕನ್ನಡ ಸಿನಿಮಾ ರಂಗಕ್ಕೆ ತೊಂಬತ್ತು ವರ್ಷ ತುಂಬಿರುವ ನೆನಪಿಗೆ ಪತ್ರಕರ್ತರಾದ ಡಾ.ಶರಣು ಹುಲ್ಲೂರು ಮತ್ತು ಎಸ್‌. ಶ್ಯಾಮ್‌ ಪ್ರಸಾದ್‌ ಬರೆದಿರುವ ದ್ವಿಭಾಷಾ ಪುಸ್ತಕ ‘ಚಂದನವನದ ಚಿಲುಮೆಗಳುʼ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು (Book Release)‌ ಡಿ.15 ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರು ನಗರದ ರಾಜಾಜಿನಗರದಲ್ಲಿರುವ ಎಂ.ಎಂ.ಬಿ ಲೆಗಸ್ಸಿ ಯಲ್ಲಿ ಏರ್ಪಡಿಸಲಾಗಿದೆ.

ಚಂದನವನ ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಮತ್ತು ಹೆಮ್ಮರ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಗಣ್ಯರಿಂದ ‘ಚಂದನವನದ ಚಿಲುಮೆಗಳುʼ ಪುಸ್ತಕ ಲೋಕಾರ್ಪಣೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Reliance Retail: ಹೋಮ್ ಥಿಯೇಟರ್ ಎಲ್‌ಇಡಿ ಟಿವಿಗಳನ್ನು ಬಿಡುಗಡೆ ಮಾಡಿದ ರಿಲಯನ್ಸ್ ರಿಟೇಲ್!