Thursday, 15th May 2025

ಪುಸ್ತಕಗಳು ಇದ್ದರೆ ಸ್ವರ್ಗಕ್ಕೆ ದಾರಿ ಎಂದ ನಟ ರಮೇಶ್ ಅರವಿಂದ್

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 33

ವಿಶ್ವವಾಣಿ ಕ್ಲಬ್‌ ಹೌಸ್‌ನಲ್ಲಿ ತ್ಯಾಗರಾಜನ ಆಲಾಪನೆ

ಬೆಂಗಳೂರು: ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ತುಂತುರು ವರ್ಷಧಾರೆ, ಆದರೆ, ವಿಶ್ವಾದ್ಯಂತ ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ’ಅಮೃತ ವರ್ಷಿಣಿ’ಯ ಅಬ್ಬರ. ಇದಕ್ಕೆ ಕಾರಣ ಎವರ್‌ಗ್ರೀನ್ ಸುರಸುಂದರಾಂಗನ ಸುಲಲಿತವಾದ ಮಾತುಗಳು ಎಂದರೆ ತಪ್ಪಾಗದು.

ಸುಂದರ ಸ್ವಪ್ನಗಳ ಕಂಡು ಶ್ರೀಗಂಧದಂತಹ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಅವರದ್ದು ಲವಲವಿಕೆಯ ಬದುಕು. ವೀಕೆಂಡ್ ವಿತ್ ರಮೇಶ್‌ನಲ್ಲಿ ಎಲ್ಲರನ್ನೂ ಗೌರವಿಸುವ ಅವರ ಕಲೆಗೆ ಎಲ್ಲರೂ ಗೌರವ ಕೊಟ್ಟವರೇ, ಅವರ ಮಾತುಗಳು ಕೂಡ ಸಿನಿಮಾ ನಟನೊಬ್ಬನ ಮಾತುಗಳು ಎನ್ನುವುದಕ್ಕಿಂತ ಯುವ ಜನರ ಪಾಲಿನ ಮೋಟಿವೇಷನ್ ಲೈನ್‌ಗಳು. ಇಂತಹ ತಮ್ಮ ಅಭಿವ್ಯಕ್ತಿಯನ್ನು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿಯೂ ಪ್ರಕಟಪಡಿಸಿದ್ದು ರಮೇಶ್ ಅರವಿಂದ್ ಅವರ ಹೆಗ್ಗಳಿಕೆ.

ಕ್ಲಬ್‌ಹೌಸ್ ಸಂವಾದದಲ್ಲಿ ಮಾತನಾಡುತ್ತಾ, ತಮ್ಮ ಈ ಲವಲವಿಕೆ ಮತ್ತು ಜ್ಞಾನ ಮತ್ತು ಇತರರನ್ನು ಪ್ರೇರೇಪಣೆಗೊಳಿಸುವ ಸ್ವಭಾವಕ್ಕೆ ತಮ್ಮ ಓದುವ ಹವ್ಯಾಸವೇ ಕಾರಣ ಎಂಬುದನ್ನು ಬಿಚ್ಚಿಟ್ಟರು. ಜ್ಞಾನ ಗಳಿಸುವ ಮನಸ್ಸಿದ್ದವ ಗೆಲುವಿನ ಸನಿಹಕ್ಕೆ ಸಾಗಬಲ್ಲ ಎಂಬುದನ್ನು ಹೇಳುತ್ತಾ ಅವರು, ಪುಸ್ತಕಗಳು ಸ್ವರ್ಗಕ್ಕೆ ದಾರಿ ತೋರಿಸುವ ಸನ್ಮಾರ್ಗದ ಸರಕುಗಳು ಎಂಬುದನ್ನು ಸಾರಿದರು.

ಜ್ಞಾನ ಗಳಿಕೆಗೆ ಪುಸ್ತಕವೊಂದು ಸಾಧನ, ಅದನ್ನು ಹೊರತುಪಡಿಸಿ ಮಸ್ತಕಕ್ಕೆ ಮುದ ನೀಡುವ ಆಧುನಿಕ ತಂತ್ರಜ್ಞಾನದ ಯಾವುದೇ ಜ್ಞಾನ ಮಾರ್ಗ ಸಿಕ್ಕರೂ, ಅದನ್ನು ಪಡೆಯುವುದು ತಪ್ಪಲ್ಲ. ಆ ಮೂಲಕವೇ ಸ್ವರ್ಗ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಕ್ಯಾರೆಕ್ಟರ್ ನಮ್ಮ ನಡವಳಿಕೆ ಮೇಲೆ ಅವಲಂಬಿ
ಸಿರುತ್ತದೆ. ನಂಬಿಕೆ ಮೇಲೆ ನಮ್ಮ ಬೆಳವಣಿಗೆ ನಿಂತಿರುತ್ತದೆ. ಸಾಧನೆಯ ದಾರಿ ಸೇರಲು ಯಾವುದೇ ಹೈವೆ ಎಂಬುದಿಲ್ಲ. ಇದು ನದಿಯಲ್ಲಿ ಒಂದು ದೋಣಿಯಲ್ಲಿ ನಿಂತು, ದಡ ಸೇರುವ ಹಂಬಲದಂತೆ. ಅಲ್ಲಿ ಹೈವೆಯಂತೆ ಒಂದೇ ದಿಕ್ಕಿಗೆ ಸಾಗಬೇಕೆಂದೇನಿಲ್ಲ. ಎಡಕ್ಕೆ, ಬಲಕ್ಕೆ, ಹೀಗೆ ಬೇಕಾದ ಹಾಗೆ ಸಾಗಬಹುದು.

ಅರವಿಂದ ಲಹರಿ
? ಉಪನ್ಯಾಸಕ್ಕಿಂತ ನಡವಳಿಕೆಯೇ ಹೆಚ್ಚು ಪರಿಣಾಮಕಾರಿ.

? ನೀವು ಯಾರಿಗಾದರೂ ಯೂಸ್ ಫುಲ್ ಆಗಲಿಲ್ಲ ಎಂದರೆ, ನಿಮಗೆ ಬೆಲೆ ಇಲ್ಲ.

? ನನ್ನ ತಂದೆ ತಮ್ಮ ಬಾಡಿ ಡೊನೇಟ್ ಮಾಡಿದ್ದರು, ಇದು ನೂರು ಪಾಠ ಕಲಿಸಿತು.

? ಪ್ರಮಾಣಿಕ ಪ್ರಯತ್ನ ಮಾಡಿದರೆ ಸಾಕು. ಹಾಸ್ಯ, ಫಿಲಿಂಗ್ ಅದಾಗೇ ಹುಟ್ಟುತ್ತದೆ.
? ಒಳ್ಳೆಯದು ಮಾಡಿದ್ದೆಲ್ಲ ನಮಗೆ ಪ್ಲಸ್ ಆಗ್ತಾ ಹೋಗುತ್ತದೆ
? ರಾಜ, ವಿಷ್ಣು ಕನ್ನಡ ಚಿತ್ರರಂಗದ ಮೇರುಶಿಖರಗಳು
? ಕಣ್ಣನ್ ಅವರ ಮಾತುಗಳಿಂದ ಕನ್ನಡದ ಜೋಗ್ ಫಾಲ್ಸ್’ನಲ್ಲಿ ಮಿಂದಷ್ಟೇ ಸಂತಸ.

Leave a Reply

Your email address will not be published. Required fields are marked *