Sunday, 11th May 2025

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅ.20ರಿಂದ 23ರವರೆಗೆ ವಿದ್ಯುತ್‌ ವ್ಯತ್ಯಯ

bengaluru power cut

ಬೆಂಗಳೂರು: ಬೆಂಗಳೂರು ನಗರದ “66/11ಕೆ.ವಿ ಟೆಲಿಕಾಂ” ಸ್ಟೇಷನ್‌ನಲ್ಲಿ 11 ಕೆ.ವಿ. ಬ್ಯಾಂಕ್-2 ನ ಬ್ರೇಕರ್‌ಗಳನ್ನು ಬದಲಿಸುವ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ.20 ರಿಂದ 23 ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | HD Kumaraswamy: ಶಿರೂರು ಗುಡ್ಡ ಕುಸಿತ ದುರಂತ; ಮೃತನ ಪುತ್ರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಓಬಳೇಶ್ ಕಾಲೋನಿ, ರಾಯಪುರ, ಬಿನ್ನಿ ಪೇಟ್, ಪಾದರಾಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜಂಥಾ ಕಾಲೋನಿ, ಶಾಮನಾ ಗಾರ್ಡನ್, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯರಸ್ತೆ, ಬಿನ್ನಿ ಪೇಟೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾರ್ಟಸ್, ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಮನರ್ತಿ ಪೆಟ್, ಸುಲ್ತಾನ್ ಪೆಟ್, ನಲ್ಬಂಡ್‌ವಾಡಿ ಎದುರು, ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಗೋಪಾಲನ್ ಅಪಾರ್ಟ್‌ಮೆಂಟ್, ಮರಿಯಪ್ಪ ಎ. ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.