ಬೆಂಗಳೂರು: ಬೆಂಗಳೂರು ನಗರದ 220/66/11 ಕೆವಿ ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಹಲವೆಡೆ ಡಿ.8 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | Christmas Shopping 2024: ಉದ್ಯಾನನಗರಿಯ ಮಾಲ್ & ಸ್ಟ್ರೀಟ್‌ಗಳಲ್ಲಿ ಹೀಗಿದೆ ಕ್ರಿಸ್‌ಮಸ್ ಶಾಪಿಂಗ್ ಮೇನಿಯಾ!
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4ನೇ ಬ್ಲಾಕ್, ಎಂಇಐ ಕಾರ್ಖಾನೆ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜೆಕೆಡಬ್ಲೂ ಲೇಔಟ್, ಬೈರವೇಶ್ವರ ನಗರ, 10ನೇ ಕ್ರಾಸ್, 1ನೇ ಕ್ರಾಸ್, 1ನೇ ಹಂತ ಪೀಣ್ಯ ಕೈಗಾರಿಕಾ ಪ್ರದೇಶ, 3ನೇ ಕ್ರಾಸ್, 4ನೇ ಅಡ್ಡರಸ್ತೆ, ಎಸ್ ಎಸ್ ಟ್ರೇಜ್ ಏರಿಯಾ 1ನೇ ಕ್ರಾಸ್, ಅನುಸೋಲಾರ್ ರಸ್ತೆ, ಚೇರದ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಮೈಸೂರು ಇಂಜಿನಿಯರ್ ರಸ್ತೆ, ಸನ್ ರೈಸ್ ಕಾಸ್ಟಿಂಗದ ರಸ್ತೆ, 3ನೇ ಹಂತ, ವೈಷ್ಣವಿ ಮಾಲ್+ ಕಾವೇರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.