ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆವಿ ವೃಷಭಾವತಿ ಉಪಕೇಂದ್ರದಲ್ಲಿನ ಹಲವೆಡೆ ಡಿ.21 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | Christmas Dress 2024: ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾದ ಲೇಡಿಸ್ ಫ್ಯಾಷನ್ ವೇರ್‌ಗಳಿವು!
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಮೈಸೂರು ರಸ್ತೆ ಆರ್.ವಿ. ಎಂಜಿನಿಯರಿಂಗ್ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬಿ.ಡಿ.ಎ ಇಂದ್ರಪ್ರಸ್ತ, ಮೆಡಾ ಗ್ರೀನ್, ಎಂ.ಬಿ.ಆರ್ ಶಾಂಗ್ರೀಲಾ, ಬಿ.ಡಿ.ಎ ವಲಗೇರಹಳ್ಳಿಯ ಎಲ್ಲಾ ಬ್ಲಾಕ್‌ಗಳು, ಕೆಂಗೇರಿ, ಹರ್ಷ ಲೇಔಟ್, ಐರಾವತ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೆಂಗೇರಿ ಮೇಗಳ ಬೀದಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.