ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 66/11ಕೆ.ವಿ ರೆಮಕೊ ಸ್ಟೇಷನ್‌ನಲ್ಲಿನ ಹಲವೆಡೆ ಡಿ.14 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಮೈಸೂರು ರೋಡ್ 7ನೇ ಅಡ್ಡರಸ್ತೆ, ಶ್ಯಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪಲೈನ್, ಸಂತೋಷ ಟೆಂಟ್, ಅನಂತ ರಾಮಯ್ಯ ಕಾಂಪೌಂಡ್, ಹೊಸ ಮತ್ತು ಹಳೆ ಗುಡ್ಡದ ಹಳ್ಳಿ, ಕುವೆಂಪುನಗರ, 6ನೇ ಮತ್ತು 4ನೇ ಮೈಸೂರು ರೋಡ್ ಅಡ್ಡರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಸುದ್ದಿಯನ್ನೂ ಓದಿ | Sensex Down Today: 13ನೇ ಬ್ಲ್ಯಾಕ್ ಫ್ರೈಡೇ! ಸೆನ್ಸೆಕ್ಸ್ 1,100 ಅಂಕ ಪತನ, ಕಾರಣವೇನು?
ಬೆಂಗಳೂರು ನಗರದ 66/11ಕೆ.ವಿ ‘ಸಿʼ ಸ್ಟೇಷನ್‌ನಲ್ಲಿನ ಹಲವೆಡೆ ಡಿ. 14 ರಂದು ಶನಿವಾರ ಮತ್ತು ಡಿ.15 ರಂದು ಭಾನುವಾರ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | Kerebete Movie: ʼಕೆರೆಬೇಟೆʼ ಚಿತ್ರದ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್!
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಬೆನ್ಸನ್ ಟೌನ್, ಶಿವಾಜಿನಗರ, ವಸಂತ ನಗರ, ಎಸ್.ಜಿ. ರಸ್ತೆ, ಟಾಸ್ಕರ್ ಟೌನ್, ಪಿ.ಜಿ.ಹಳ್ಳಿ, ಚಂದ್ರಯ್ಯ & ಕ್ವೀನ್ಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.