Thursday, 15th May 2025

Bengaluru News: ಸಪ್ತಕದಿಂದ ಬೆಂಗಳೂರಿನಲ್ಲಿ ಸೆ.28ರಂದು ತಾಳಮದ್ದಳೆ

Bengaluru News

ಬೆಂಗಳೂರು: ಸಪ್ತಕ ಬೆಂಗಳೂರು ವತಿಯಿಂದ ಸೆ. 28 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರು (Bengaluru News) ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Mysuru Dasara 2024: ದಸರಾ ವೇಳೆ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್‌ ಸೌಕರ್ಯ ಕಲ್ಪಿಸಿ: ಸಿಎಂ ಸೂಚನೆ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ. ವೀರಪ್ಪ ಪಾಲ್ಗೊಳ್ಳಲಿದ್ದಾರೆ. ವಾಲಿ ವಧೆ (ಪಾರ್ತಿಸುಬ್ಬ ವಿರಚಿತ) ಪ್ರಸಂಗದ ತಾಳಮದ್ದಳೆ ನಡೆಯಲಿದೆ.

ತಾಳಮದ್ದಳೆ ಹಿಮ್ಮೇಳದಲ್ಲಿ ಆಕಾಶ್‌ ಕಾಶಿ ಭಾಗವತರಾಗಿ, ಅಕ್ಷಯ ರಾವ್‌, ವಿಟ್ಲ ಮದ್ದಳೆ, ಶ್ರೀಶ ರಾವ್‌ ನಿಡ್ಲೆ ಚೆಂಡೆ, ಶ್ರೀಶಂಕರ ಜೋಯಿಸ ಚಕ್ರತಾಳ ಹಾಗೂ ಮುಮ್ಮೇಳದಲ್ಲಿ ನಾರಾಯಣ ಯಾಜಿ ಸಾಲೇಬೈಲು, ಪ್ರೊ. ಕೆ.ಈ. ರಾಧಾಕೃಷ್ಣ, ಶಿವಕುಮಾರ್‌ ಬೇಗಾರ್‌ ಭಾಗವಹಿಸುವರು ಎಂದು ಬೆಂಗಳೂರಿನ ಸಪ್ತಕ ಸಂಚಾಲಕ ಜಿ.ಎಸ್‌. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.