Wednesday, 14th May 2025

Bengaluru News: ಬೆಂಗಳೂರಿನಲ್ಲಿ ಡಿ.28ರಂದು ಸಂಜನಾ ರಮೇಶ್ ಕಥಕ್ ರಂಗಪ್ರವೇಶ

Bengaluru News

ಬೆಂಗಳೂರು: ಬೆಂಗಳೂರಿನ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್‌ನ ಶ್ವೇತಾ ವೆಂಕಟೇಶ್ ಅವರ ಶಿಷ್ಯೆ ಸಂಜನಾ ರಮೇಶ್ ಅವರ ಕಥಕ್ ರಂಗಪ್ರವೇಶವು ಡಿ.28ರಂದು ಶನಿವಾರ ಸಂಜೆ 5ಕ್ಕೆ ಬೆಂಗಳೂರು ನಗರದ (Bengaluru News) ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ವಿದುಷಿ ಶುಭಾ ಧನಂಜಯ, ಐಸಿಸಿಆರ್ ವಲಯ ನಿರ್ದೇಶಕ ಪ್ರದೀಪ್ ಕುಮಾರ್, ತಾಂತ್ರಿಕ ನಿರ್ದೇಶಕ-ಕಲಾ ಪೋಷಕ ಸಾಯಿ ವೆಂಕಟೇಶ್, ವಿದುಷಿ ಸುಪರ್ಣಾ, ಕಲಾವಿದೆ ಡಾ.ಎಲ್. ಸುಬ್ಬುಲಕ್ಷ್ಮೀ, ತಂತ್ರಜ್ಞ ಎನ್.ಎಸ್. ರಮೇಶ್ ಪಾಲ್ಗೊಳ್ಳಲಿದ್ದಾರೆ.

ಈ ಸುದ್ದಿಯನ್ನೂ ಓದಿ | Year End Sale 2024: ಇಯರ್ ಎಂಡ್ ಸೇಲ್ ಶಾಪಿಂಗ್ ಪ್ರಿಯರಿಗೆ 5 ಸಿಂಪಲ್ ಟಿಪ್ಸ್ ಇಲ್ಲಿದೆ

ವೃತ್ತಿ- ಪ್ರವೃತ್ತಿ

ಸಂಜನಾ ಅವರು ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಪ್ರವೃತ್ತಿಯಲ್ಲಿ ಕಲಾರಾಧಕಿ. ಇದು ಅಮ್ಮನಿಂದ ಬಂದ ಬಳುವಳಿ. ಲಂಡನ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಈಕೆ ಸದ್ಯ ಸಿಂಗಪುರದ ಖಾಸಗಿ ಸಂಸ್ಥೆಯೊಂದಕ್ಕೆ ಡಿಸೈನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಂಡನ್‌ನಲ್ಲಿ ವಿದ್ಯಾರ್ಜನೆ ಮಾಡುವ ಹಂತದಲ್ಲಿಯೇ ನೌಕರಿ ದೊರೆತರೂ ಬಾಲ್ಯದಲ್ಲೇ ಕಲಿತಿದ್ದ ನೃತ್ಯದ ಪಟ್ಟುಗಳನ್ನು ಇನ್ನಷ್ಟು ಕರಗತ ಮಾಡಿಕೊಳ್ಳಬೇಕೆಂದೇ ಭಾರತಕ್ಕೆ ಮರಳಿದರು. ಕಲಾ ರಂಗದಲ್ಲಿ ಮತ್ತಷ್ಟು ಅರಳಬೇಕು. ಈ ಮೂಲಕ ಕಲಾವಿದೆಯೂ ಆದ ಅಮ್ಮನ ಕನಸು – ನನಸು ಮಾಡುವಲ್ಲಿ ಬದ್ಧತೆ ತೋರಬೇಕು ಎಂಬುದೇ ಮೊದಲ ಸಂಕಲ್ಪ.