Wednesday, 14th May 2025

ಬಣಜಿಗ ಯುವಘಟಕದಿಂದ ಅಂಬೇಡ್ಕರ್ ವೃತ್ತಕ್ಕೆ ಹೂಮಾಲೆ

ಸಿಂಧನೂರು: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ತ ತಾಲೂಕು ಯುವ ಬಣಜಿಗ ಸಮಾಜದ ವತಿಯಿಂದ ವೃತ್ತದ ಬಳಿ ಹೂಮಾಲೆ ಹಾಕಿ ಭಾವ ಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.

ಈ ವೇಳೆ ಹಿರಿಯ ಮುಖಂಡ ಶಿವಕುಮಾರ್ ಜವಳಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅನೇಕ ಸಮುದಾಯಗಳಿಗೆ ಬೆಳಕು ಆಗಿದ್ದಾರೆ ಅವರು ನೀಡಿದ ಸಂವಿಧಾನದಿಂದ ನ್ಯಾಯಯುತವಾಗಿ ಎಲ್ಲರಿಗೂ ಸಹಕಾರ ಆಗುತ್ತಿದೆ ಎಂದರು.

ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್ ಯರದಿಹಾಳ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೊಂದವರಿಗೆ ಬೆಳಕು ಆಗಿದ್ದಾರೆ. ಶಿಕ್ಷಣ ಸಂಘಟನೆ ಹೋರಾಟಕ್ಕೆ ಒತ್ತು ಕೊಟ್ಟ ಮಹಾನ್ ವ್ಯಕ್ತಿ ಆಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬರು ಹೋಗಬೇಕಾಗಿದೆ. ಆಗ ಮಾತ್ರ ನಮಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಯುವ ಘಟಕದ ಗೌರವಾಧ್ಯಕ್ಷ ಸಂತೋಷ್ ಅಂಗಡಿ, ಪ್ರಧಾನ ಕಾರ್ಯದರ್ಶಿ ರಂಗನಾಥ್ ಗೋಮರ್ಸಿ, ಖಜಾಂಚಿ ವೀರೇಶ್ ದಿದ್ದಿಗಿ, ಸುಗುರೇಶ್ ಬಪ್ಪೂರ್, ವಿಶ್ವನಾಥ್ ಚನ್ನಳ್ಳಿ, ಬಸವರಾಜ ಭೂತಲದಿನ್ನಿ, ಅಮರೇಶ್ ಇತರರು ಇದ್ದರು.

Leave a Reply

Your email address will not be published. Required fields are marked *