Sunday, 11th May 2025

Ayogya Movie: ನೀನಾಸಂ ಸತೀಶ್-‌ ರಚಿತಾ ಮತ್ತೆ ಜೋಡಿ, ಅಯೋಗ್ಯ-2 ಸಿನಿಮಾ ಅನೌನ್ಸ್

ayogya 2 movie

ಬೆಂಗಳೂರು: ನಾಯಕ ನಟ ನೀನಾಸಂ ಸತೀಶ್ (Sathish Ninasam) ಹಾಗೂ ರಚಿತಾ ರಾಮ್ (Rachita Ram) ʼಅಯೋಗ್ಯʼ ಸಿನಿಮಾದ (Ayogya movie) ಸೀಕ್ವೆಲ್‌ಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಡೈರೆಕ್ಟರ್ ಮಹೇಶ್ ʼಅಯೋಗ್ಯ- 2ʼ (Ayogya- 2) ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಈ ಜೋಡಿ ಮತ್ತೆ ಮೋಡಿ ಮಾಡಲಿದೆ.

ಸೂಪರ್‌ಹಿಟ್‌ ಮೂವಿ ʼಅಯೋಗ್ಯʼ ಸೀಕ್ವೆಲ್‌ಗೆ ʼಅಯೋಗ್ಯ- 2ʼ ಎಂಬ ಹೆಸರಿಡಲಾಗಿದೆ. ಯುವ ಡೈರೆಕ್ಟರ್ ಎಸ್. ಮಹೇಶ್, ಅಯೋಗ್ಯ ಚಿತ್ರದ ಮೂಲಕ ತಾವು ಒಳ್ಳೆ ಡೈರೆಕ್ಟರ್ ಎಂಬುದನ್ನು ಸಾಬೀತು ಮಾಡಿದ್ದಲ್ಲದೆ, ಸಿನಿಮಾ ಕೂಡ ಹಿಟ್‌ ಆಗಿತ್ತು. ನಂತರ ಅವರು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ʼಮದಗಜʼ ಫಿಲಂನಲ್ಲಿ ನಿರ್ದೇಶನ ಮಾಡಿದ್ದರು. ಇದೀಗ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅವರನ್ನು ಒಂದುಗೂಡಿಸಿ ಅಯೋಗ್ಯ 2 ಡೈರೆಕ್ಟ್ ಮಾಡುತ್ತಿದ್ದಾರೆ.

ಡಿಸೆಂಬರ್ 11ರಿಂದ ಅಯೋಗ್ಯ ಶೂಟಿಂಗ್ ಶುರುವಾಗಲಿದೆ. ಅಯೋಗ್ಯ ಸಿನಿಮಾ ಬಂದು 6 ವರ್ಷಗಳೇ ಕಳೆದಿವೆ. ಈ ಆರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಅಯೋಗ್ಯ-2 ಸಿನಿಮಾ ಶುರು ಆಗಿದೆ. ಇವರ ಕನಸಿಗೆ ಎಂ. ಮುನೇಗೌಡ ಸಾಥ್ ಕೊಟ್ಟಿದ್ದು, ಚಿತ್ರ ನಿರ್ಮಾಣ ಮಾಡಲು ರೆಡಿ ಆಗಿದ್ದಾರೆ.

ಅಯೋಗ್ಯ- 2 ಸಿನಿಮಾದಲ್ಲಿ ಹಳ್ಳಿ ಸೊಗಡಗಿನ ಕಥೆ ಇತ್ತು. ಅಯೋಗ್ಯನಾಗಿದ್ದ ಹೀರೋ ಸಿದ್ದೇಗೌಡ ಹೇಗೆ ಯೋಗ್ಯ ಆಗುತ್ತಾನೆ ಎಂಬ ಕಥೆ ಇತ್ತು. ರಚಿತಾ ರಾಮ್ ಅದರಲ್ಲಿ ಸತೀಶ್‌ಗೆ ಸಾಥ್‌ ನೀಡಿದ್ದರು. ಅಯೋಗ್ಯ ಸೂಪರ್ ಹಿಟ್ ಆಗಿತ್ತು. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ ಜನಕ್ಕೆ ಮೆಚ್ಚುಗೆ ಆಗಿತ್ತು.

ಇದನ್ನೂ ಓದಿ: Posh Committee: ಕವಿತಾ ಲಂಕೇಶ್‌ ನೇತೃತ್ವದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಮಿಟಿ ರಚನೆ