Thursday, 15th May 2025

Actor Darshan : ದರ್ಶನ್‌ಗೆ ಮತ್ತೆ ನಿರಾಸೆ; ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

darshan

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣದ ಆರೋಪಿಯಾಗಿರು ದರ್ಶನ್‌ ತೂಗುದೀಪಗೆ (Actor Darshan) ಕೋರ್ಟ್‌ ಹೋರಾಟದಲ್ಲಿ ಶುಕ್ರವಾರ ಮತ್ತೆ ಹತಾಶೆ ಮೂಡಿಸಿದೆ. ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಹೀಗಾಗಿ ಜಾಮೀನು ಪಡೆದು ಹೊರಕ್ಕೆ ಬರುವ ಅವರ ನಿರೀಕ್ಷೆ ಮುಂದೂಡಿಕೆಯಾಗಿದೆ. ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಟ ದರ್ಶನ್‌ ಪರ ವಕೀಲರು 57ನೇ ಹೆಚ್ಚವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಟನ ಪರ ವಕೀಲರು ವಾದ ಮಂಡನೆ ಶುಕ್ರವಾರ ವಾದ ಮಂಡಿಸಿದರು. ಬಳಿಕ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್‌ 5 ಕ್ಕೆ (ಶನಿವಾರ) ಮುಂದೂಡಿದೆ.

ಶುಕ್ರವಾರ ಕೋರ್ಟ್‌ನಲ್ಲಿ ನಟ ದರ್ಶನ್‌ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದರು. ಕೊನೆಯೂ ಕೇಸ್‌ನಲ್ಲಿ ದರ್ಶನ್‌ ತೂಗುದೀಪ ಕುಟುಂಬ ಮನವಿಯಂತೆ ಹಿರಿಯ ವಕೀಲರು ಭಾಗಿಯಾಗಿದ್ದರು. ವಾದ ಮಂಡನೆ ಆರಂಭಿಸಿದ ವಕೀಲರು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆ ಆರೋಪಗಳ ಆಧಾರದಲ್ಲಿ ತೀರ್ಪು ನೀಡಬಾರದೆಂದು ಕೋರ್ಟ್‌ಗೆ ಮನವಿ ಮಾಡಿದರು.

ಯಾವಾಗ ಬೇಲ್‌ ಸಾಧ್ಯತೆ?

ನಟ ದರ್ಶನ್‌ ಪರ ವಕೀಲರು ವಾದ ಮಾಡಿರು. ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಶನಿವಾರ ಮೊದಲು ನಟನ ಪರ ವಕೀಲರ ವಾದ ಮುಂದುವರಿಯಲಿದೆ. ಆ ಬಳಿಕ ಸರ್ಕಾರದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನ ವಾದ ಮಾಡಲಿದ್ದಾರೆ.

ಇದನ್ನೂ ಓದಿ: Naxal Encounter : 30 ನಕ್ಸಲರನ್ನುಎನ್‌ಕೌಂಟರ್‌ ಮಾಡಿದ ಭದ್ರತಾ ಪಡೆ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗಾಗಲೇ 3 ಮಂದಿಗೆ ಜಾಮೀನು ಸಿಕ್ಕ ಹಿನ್ನೆಲೆ ಬಿಡುಗಡೆಯಾಗಿದ್ದಾರೆ. ನಟ ದರ್ಶನ್‌ ಶುಕ್ರವಾರ ಜಾಮೀನು ಸಿಕ್ಕೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಆದರೆ ನಿರಾಸೆಯಾಗಿದ್ದಾರೆ.