Monday, 12th May 2025

562 ಮಂದಿಗೆ ಕರೋನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇವೆ. 24 ಗಂಟೆಯಲ್ಲಿ ಹೊಸದಾಗಿ ಇಂದು 562 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾಸನ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ಚಿತ್ರದುರ್ಗ 02, ದಕ್ಷಿಣ ಕನ್ನಡ 03 ಮತ್ತು ಮೈಸೂರಿನಲ್ಲಿ ನಾಲ್ವರಿಗೆ ಕರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ.

ಇನ್ನೂ ಬೆಂಗಳೂರು ನಗರದಲ್ಲಿ 545 ಮಂದಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 3955871ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ 3912376 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ 3387 ಸಕ್ರೀಯ ಸೋಂಕಿತರಿದ್ದಾರೆ ಎಂದು ತಿಳಿಸಿದೆ.