Sunday, 11th May 2025

45 Movie: ಮಲ್ಟಿಸ್ಟಾರರ್ ʼ45ʼ ಚಿತ್ರದ ಆಡಿಯೊ ಹಕ್ಕು ‌ಭಾರಿ ಮೊತ್ತಕ್ಕೆ ಸೇಲ್‌!

45 Movie

ಬೆಂಗಳೂರು: ಕರುನಾಡ ‌ಚಕ್ರವರ್ತಿ ಡಾ. ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರದ (45 Movie) ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಈ ನಡುವೆ ಚಿತ್ರತಂಡದಿಂದ ಮಹತ್ವದ ಸುದ್ದಿ ಹೊರಬಂದಿದೆ.

“45” ಚಿತ್ರದ ಆಡಿಯೋ ರೈಟ್ಸ್ ಅನ್ನು ಪ್ರತಿಷ್ಟಿತ ಆನಂದ್ ಆಡಿಯೋ ಸಂಸ್ಥೆಯವರು ಪಡೆದುಕೊಂಡಿದ್ದಾರೆ. ಚಿತ್ರದ ನಿರ್ದೇಶಕರೂ ಆಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೆ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ‌. ಭಾರಿ ಮೊತ್ತಕ್ಕೆ ಆಡಿಯೋ ‌ರೈಟ್ಸ್ ಮಾರಾಟವಾಗಿದ್ದು ಸದ್ಯದಲ್ಲೇ ಹಾಡುಗಳು ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ | Diwali Jewel Shopping Tips: ಧನ್‌ ತೆರಾಸ್‌ ಹಬ್ಬದಂದು ಆಭರಣ ಖರೀದಿಸುವ ಮಹಿಳೆಯರಿಗೆ ಇಲ್ಲಿವೆ 5 ಸಿಂಪಲ್‌ ಐಡಿಯಾ

ಸದಭಿರುಚಿಯ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಅವರ ನಿರ್ಮಾಣ, ಮ್ಯೂಸಿಕಲ್ ಮಾಂತ್ರಿಕ ಅರ್ಜುನ್ ಜನ್ಯ ಮೊದಲ ನಿರ್ದೇಶನ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಅವರ ಅಭಿನಯದಲ್ಲಿ ಅದ್ದೂರಿಯಾಗಿ‌ ಮೂಡಿಬರುತ್ತಿರುವ “45” ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.