Wednesday, 14th May 2025

ಮಹಿಳೆಯರ ಸ್ಟಾರ್ಟ್​ ಅಪ್​ಗಳಿಗೆ 10 ಲಕ್ಷ ಸಾಲ

ಬೆಂಗಳೂರು: ಮಹಿಳಾ ಉದ್ದಿಮೆದಾರರು/ ಮಹಿಳೆಯರ ನೇತೃತ್ವದ ಸ್ಟಾರ್ಟ್​ ಅಪ್​ಗಳಿಗೆ ಕರ್ನಾಟಕ ಬಜೆಟ್ 2022ರಲ್ಲಿ ಮಹಿಳಾ ಅಭಿವೃದ್ಧಿ ನಿಗಮ ದಿಂದ 10 ಲಕ್ಷದ ತನಕ ಸಾಲ ನೀಡಲಾಗುವುದು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶುಕ್ರವಾರ ಮಹತ್ತರವಾದ ಸಾಲ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 10 ಲಕ್ಷ ರೂಪಾಯಿಗಳ ತನಕ ನೇರ ಸಾಲವನ್ನು ಒದಗಿಸಿ ಪ್ರೋತ್ಸಾಹಿಸಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ಅವರು ಬಜೆಟ್​ನಲ್ಲಿ ಪ್ರಸ್ತಾವ ಮಾಡಿದ್ದಾರೆ. “ಎಲಿವೇಟ್” ಯೋಜನೆಅಡಿಯಲ್ಲಿ ಗುರುತಿಸಲಾದ ಮಹಿಳಾ ಉದ್ದಿಮೆ ದಾರರು/ಮಹಿಳೆ ನೇತೃತ್ವದ ಸ್ಟಾರ್ಟ್​ಅಪ್​ಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಡೆಯಿಂದ ನೇರವಾಗಿ 10 ಲಕ್ಷ ರೂಪಾಯಿ ತನಕ ಒದಗಿಸಿ, ಪ್ರೋತ್ಸಾಹಿಸಲಾಗುತ್ತದೆ.

ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ. ಮೀಸಲಿಟ್ಟಿದ್ದಾರೆ.