Sunday, 18th May 2025

ICC Test Ranking: ನಾಲ್ಕನೇ ಸ್ಥಾನಕ್ಕೆ ಕುಸಿದ ಯಶಸ್ವಿ ಜೈಸ್ವಾಲ್‌, ಅಗ್ರ ಸ್ಥಾನದಲ್ಲಿ ಜೋ ರೂಟ್‌!

Yashasvi Jaiswal loses No. 2 spot in ICC Test rankings to Harry Brook; No.1 Joe Root faces three-way threat

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಪರ್ತ್‌ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ 161 ರನ್‌ಗಳನ್ನು ಕಲೆ ಹಾಕುವ ಮೂಲಕ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ(ICC Test Ranking) ಎರಡನೇ ಸ್ಥಾನಕ್ಕೇರಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌, ಇದೀಗ ನಾಲ್ಕು ಸ್ಥಾನಗಳು ಕುಸಿದಿದ್ದಾರೆ. ನ್ಯೂಜಿಲೆಂಡ್‌ ಎದುರು ಇಂಗ್ಲೆಂಡ್‌ ಹಾಗೂ ಶ್ರೀಲಂಕಾ ಎದುರು ದಕ್ಷಿಣ ಆಫ್ರಿಕಾ ಟೆಸ್ಟ್‌ ಪಂದ್ಯಗಳಲ್ಲಿ ಗೆಲುವು ಪಡೆದ ಬಳಿಕ ಐಸಿಸಿ ಟೆಸ್ಟ್‌ ಶ್ರೇಯಾಂಕವನ್ನು ಪರಿಷ್ಕೃತಗೊಳಿಸಿದೆ.

ಕ್ರೈಸ್ಟ್‌ಚರ್ಚ್‌ನಲ್ಲಿ ಹ್ಯಾರಿ ಬ್ರೂಕ್‌ (171 ರನ್‌ಗಳು) ಅವರ ಶತಕದ ಬಲದಿಂದ ಇಂಗ್ಲೆಂಡ್‌ ತಂಡ ಎಂಟು ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತ್ತು. ಇದರ ಫಲವಾಗಿ ಹ್ಯಾರಿ ಬ್ರೂಕ್‌ ಅವರು ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಯಶಸ್ವಿ ಜೈಸ್ವಾಲ್‌ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಶ್ರೀಲಂಕಾ ವಿರುದ್ದ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾ ತಂಡದ ತೆಂಬಾ ಬವೂಮ ಅವರು 14 ಸ್ಥಾನಗಳಲ್ಲಿ ಏರಿಕೆ ಕಂಡಿದ್ದು, 10ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇನ್ನು ಶ್ರೀಲಂಕಾ ತಂಡದ ಕಮಿಂದು ಮೆಂಡಿಸ್‌ 70 ರನ್‌ಗಳನ್ನು ಕಲೆ ಹಾಕಿದ ಪರಿಣಾಮ ಅವರು ಎರಡು ಸ್ಥಾನಗಳಲ್ಲಿ ಏರಿಕೆ ಕಂಡಿದ್ದು ಏಳನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಅಗ್ರ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಜೋ ರೂಟ್‌

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಯಕ ಜೋ ರೂಟ್‌ ಅವರು ನ್ಯೂಜಿಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅವರು ಇದೇ ಮೊದಲ ಬಾರಿ ಡಕ್‌ಔಟ್‌ ಆಗಿದ್ದಾರೆ. ಇದೀಗ ಹ್ಯಾರು ಬ್ರೂಕ್‌ ಅವರ ಖಾತೆಯಲ್ಲಿ 854 ಅಂಕಗಳಿವೆ ಹಾಗೂ ಜೋ ರೂಟ್‌ ಖಾತೆಯಲ್ಲಿ 895 ಅಂಕಗಳಿವೆ. ಇವರಿಬ್ಬರ ನಡುವೆ 41 ಅಂಕಗಳ ವ್ಯತ್ಯಾಸವಿದೆ. ವೆಲ್ಲಿಂಗ್ಟನ್‌ ಟೆಸ್ಟ್‌ನಲ್ಲಿಯೂ ಜೋ ರೂಟ್‌ ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ಮುಂದುವರಿಸಿದರೆ, ಜೋ ರೂಟ್‌ ಅವರು ಮುಂದಿನ ವಾರ ಅಗ್ರ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇನ್ನು ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌ ಕೂಡ 830 ಅಂಕಗಳ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರಿಂದಲೂ ಅಗ್ರ ಸ್ಥಾನದ ಜೋ ರೂಟ್‌ಗೆ ಅಪಾಯವಿದೆ. ಶುಕ್ರವಾರ ಆರಂಭವಾಗುವ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಜೈಸ್ವಾಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ಮುಂದುವರಿಸಿದರೆ, ಇಂಗ್ಲೆಂಡ್‌ ಮಾಜಿ ನಾಯಕನ ಅಗ್ರ ಸ್ಥಾನಕ್ಕೆ ಸನಿಹವಾಗಬಹುದು.

ಈ ಸುದ್ದಿಯನ್ನು ಓದಿ: Yashasvi Jaiswal: ವಿಶ್ವ ದಾಖಲೆ ಸನಿಹ ಯಶಸ್ವಿ ಜೈಸ್ವಾಲ್