Monday, 12th May 2025

ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌’ಗೆ ಆಸೀಸ್‌ ತಂಡ ಪ್ರಕಟ

ಸಿಡ್ನಿ: ಇಂಗ್ಲೆಂಡಿನ ಓವಲ್‌ನಲ್ಲಿ ಮುಂಬರುವ ಜೂನ್‌ 7ರಂದು ನಡೆಯಲಿರುವ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾದ ತಂಡವನ್ನು ಪ್ರಕಟಿಸ ಲಾಗಿದೆ.

ಡೇವಿಡ್‌ ವಾರ್ನರ್‌ ಸೇರಿದಂತೆ 17 ಜನರ ತಂಡವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿದೆ. ಮೇ 28ರಂದು 15 ಜನರ ತಂಡವನ್ನು ಅಂತಿಮವಾಗಿ ಪ್ರಕಟಿಸಲಾಗುವುದು ಎಂದು ಆಯ್ಕೆ ಸಮಿತಿ ತಿಳಿಸಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತದ ವಿರುದ್ಧ ನಡೆದ ಆಯಶಸ್‌ ಟೆಸ್ಟ್‌ ಸರಣಿಯ ತಂಡ ವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ.

ಈ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಜೂನ್‌ 7 ರಿಂದ 11ರ ವರೆಗೆ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

2021ರಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿದ್ದ ಭಾರತ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಗಿತ್ತು.