Wednesday, 14th May 2025

ಮಾಜಿ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್ ವೀಕ್ಷಕ ವಿವರಣೆಗೆ ವಿದಾಯ

ನವದೆಹಲಿ: ಖಾಸಗಿ ಚಾನೆಲ್ ಕಾಮೆಂಟ್ರಿ ಪ್ಯಾನಲ್‌ನಲ್ಲಿ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಇದ್ದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್(66) ವೀಕ್ಷಕ ವಿವರಣೆಗೆ ವಿದಾಯ ಘೋಷಿಸಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್‌ ಮತ್ತು ಭಾರತ ತಂಡಗಳ ನಡುವಣ ಟೆಸ್ಟ್ ಸರಣಿಯಲ್ಲಿಯೂ ಅವರು ವೀಕ್ಷಕ ವಿವರಣೆ ನೀಡಿದ್ದರು.

ವಿಶ್ವದ ಎಲ್ಲ ತಂಡಗಳ ದಿಗ್ಗಜ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಮೂಡಿಸಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಕಾಮೆಂಟ್ರಿಯಲ್ಲಿಯೂ ಬಹಳಷ್ಟು ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ನೇರ, ನಿಷ್ಠುರ ಹೇಳಿಕೆಗಳಿಂದ ಚರ್ಚೆಗಳನ್ನೂ ಹುಟ್ಟುಹಾಕಿದ್ದಾರೆ. ಇತ್ತೀಚೆಗೆ ಬ್ಲ್ಯಾ ಕ್ ಲೈವ್ಸ್‌ ಮ್ಯಾಟರ್‌ ಪ್ರತಿಭಟನೆಗಳ ಸಂದರ್ಭದಲ್ಲಿ ಅವರ ಭಾಷಣಗಳು ಗಮನ ಸೆಳೆದಿದ್ದವು.

1991ರಲ್ಲಿ ಕ್ರಿಕೆಟ್ ಕಾಮೆಂಟ್ರಿ ಮಾಡಲು ಆರಂಭಿಸಿದ್ದರು. 2020ರಲ್ಲಿ ನಿಗದಿತ ಟೂರ್ನಿಗಳು ನಡೆಯದಿದ್ದರೆ, ನನ್ನ ಪಾಲಿನ ಕೋಟಾವನ್ನು ಮುಂದಿನ ವರ್ಷದಲ್ಲಿ ಮಾಡುವ ಬಗ್ಗೆ ಯೋಚಿಸುತ್ತೇನೆ ಎಂದಿದ್ದೆ. ನನಗೆ ಬೆಂಬಲ ನೀಡಿ ರುವ ಈ ಸಂಸ್ಥೆಯಿಂದ ಹಾಗೆಯೇ ಹೊರನಡೆಯಲು ಸಾಧ್ಯವಿಲ್ಲ’ ಎಂದರು.

1987ರಲ್ಲಿ ಹೋಲ್ಡಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಅವರು 60 ಟೆಸ್ಟ್ ಮತ್ತು 102 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಒಟ್ಟು 391 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *