Tuesday, 13th May 2025

3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಗೆ ಶುಕ್ರವಾರ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿದರು.

ಮುಂದಿನ ವರ್ಷಾರಂಭದಲ್ಲಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಗೆ ಈ ಸಲದ ವಾರ್ಷಿಕೋತ್ಸವ ವಿಶೇಷವಾದುದು. ಗರ್ಭಿಣಿ ಅನುಷ್ಕಾ ತವರಿನಲ್ಲೇ ಉಳಿದುಕೊಂಡಿದ್ದರೆ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಆದರೂ ವಿಶೇಷ ಸಂದೇಶಗಳ ಮೂಲಕ ವಾರ್ಷಿಕೋತ್ಸವವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ.

‘3 ವರ್ಷ ಮತ್ತು ಜತೆಯಾಗಿರಲು ಇಡೀ ಜೀವಮಾನವೇ ಇದೆ’ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ. ಜತೆಗೆ ವಿವಾಹದ ಕಪ್ಪು-ಬಿಳುಪು ಚಿತ್ರವನ್ನೂ ಪ್ರಕಟಿಸಿದ್ದಾರೆ. 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ‘ವಿರೂಷ್ಕಾ’ ಖ್ಯಾತಿಯ ಕೊಹ್ಲಿ-ಅನುಷ್ಕಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ಮಿಸ್ ಯೂ’ ಎಂದು ಅನುಷ್ಕಾ ಶರ್ಮ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡಿರುವ ಚಿತ್ರವನ್ನೂ ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *