ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (Virat Kohli) ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ದೇಶಿ ಕ್ರಿಕೆಟ್ ಆಡಬೇಕೆಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದಾರೆ ಹಾಗೂ ಇದರ ಪರಿಣಾಮವಾಗಿ ಭಾರತ ತಂಡ ಕೂಡ 1-3 ಅಂತರದಲ್ಲಿ ಸರಣಿಯನ್ನು ಸೋತಿತ್ತು.
ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಎಂಟು ಬಾರಿ ಆಫ್ ಸ್ಟಂಪ್ ಹೊರಗಡೆ ಎಸೆತಗಳಲ್ಲಿ ಔಟ್ ಆಗಿದ್ದರು. ಆದರೆ, ರೋಹಿತ್ ಶರ್ಮಾ ಆಡಿದ ಐದು ಇನಿಂಗ್ಸ್‌ಗಳಿಂದ 6.2ರ ಸರಾಸರಿಯಲ್ಲಿ 31 ರನ್ ಗಳಿಸಿದ್ದಾರೆ. ಆದರೆ, ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೇ ಹೊರಗುಳಿದಿದ್ದರು. ಐಸಿಸಿ ರಿವ್ಯೂವ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕೆಂದು ಸಲಹೆ ನೀಡಿದ್ದಾರೆ. ಸ್ಪಿನ್ ಪಿಚ್‌ಗಳಲ್ಲಿ ಅಭ್ಯಾಸ ಮಾಡುವ ಜೊತೆಗೆ ಈಗಿನ ತಲೆ ಮಾರಿನ ಆಟಗಾರರಿಗೆ ನೆರವು ನೀಡಬಹುದು ಎಂದು ಹೇಳಿದ್ದಾರೆ.
“ಅವರಿಗೆ ಹೆಚ್ಚು ದಿನಗಳ ಅಂತರವಿದ್ದರೆ, ಅವರು ದೇಶಿ ಕ್ರಿಕೆಟ್‌ಗೆ ಮರಳಬೇಕು ಮತ್ತು ಸ್ವಲ್ಪ ಕ್ರಿಕೆಟ್ ಆಡಬೇಕು. ಆ ಮೂಲಕ ಇಲ್ಲಿನ ಸಂಗತಿಗಳು ಹೇಗೆಂದು ಅವರು ನೋಡಬೇಕು. ಏಕೆಂದರೆ ನೀವು ದೀರ್ಘಾವಧಿ ಟೆಸ್ಟ್ ಪಂದ್ಯಗಳನ್ನು ಆಡಿದ್ದೀರಿ. ಹಾಗಾಗಿ ಈ ಎರಡು ಕಾರಣಗಳಿಂದಾಗಿ ದೇಧಿ ಕ್ರಿಕೆಟ್ ಆಡುವುದು ಮುಖ್ಯವಾಗಿದೆ. ಅದೇನೆಂದರೆ ನೀವು ಪ್ರಸ್ತುತ ಪೀಳಿಗೆಯೊಂದಿಗೆ ನಿಕಟವಾಗಿರುವಿರಿ ಮತ್ತು ನಿಮ್ಮ ಅನುಭವದೊಂದಿಗೆ ಆ ಯುವ ಪೀಳಿಗೆಗೆ ನೀವು ಕೊಡುಗೆ ನೀಡಬಹುದು,” ಎಂದು ತಿಳಿಸಿದ್ದಾರೆ.
“ಮುಖ್ಯವಾಗಿ ನೀವು ಎಂದಾದರೂ ಆಡುವುದಕ್ಕಿಂತ ಹೆಚ್ಚಾಗಿ ನೀವು ಸ್ಪಿನ್ ಬೌಲಿಂಗ್‌ಗೆ ಆಡುತ್ತೀರಿ. ಆದ್ದರಿಂದ ಭಾರತದ ದಾಖಲೆಯನ್ನು ನೀವು ಒಮ್ಮೆ ನೋಡಿದರೆ, ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಭಾರತವು ಶ್ರೇಷ್ಠವಲ್ಲ. ಎದುರಾಳಿ ತಂಡದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿದ್ದರೆ ಅವರು ನಿಮಗೆ ತೊಂದರೆ ಕೊಡಬಹುದು,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Champions Trophy: ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ? ವಿಕೆಟ್ ಕೀಪರ್ ಸ್ಥಾನಕ್ಕೆ ಕನ್ನಡಿಗ!