Sunday, 18th May 2025

ʻVinod Kambliಗೆ ನೆರವು ನೀಡಬೇಕುʼ: ಸಚಿನ್‌ ತೆಂಡೂಲ್ಕರ್‌ಗೆ ಕಪಿಲ್‌ ದೇವ್ ಮನವಿ!

Vinod Kambli: 'I wish his closest friends would spend time with him': Kapil Dev's indirect request to Sachin Tendulkar

ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ (Vinod Kambli) ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಲೆಜೆಂಡರಿ ಆಲ್‌ರೌಂಡರ್ ಕಪಿಲ್ ದೇವ್ ಆಗ್ರಹಿಸಿದ್ದಾರೆ ಹಾಗೂ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮೊದಲಿಗೆ ಸ್ವತಃ ಅವರೇ ಪ್ರಯತ್ನ ನಡೆಸಬೇಕೆಂದು ಹೇಳಿದ್ದಾರೆ. ಅತಿಯಾದ ಮದ್ಯಪಾನದಿಂದಾಗಿ ಕಾಂಬ್ಳಿ, ಹಲವು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ, ಕೋಚ್‌ ರಮಾಕಾಂತ್ ಆರ್ಚೇಕರ್ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ವಿನೋದ್‌ ಕಾಂಬ್ಳಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಹಾಗೂ ಸಚಿನ್‌ ತೆಂಡೂಲ್ಕರ್‌ ಕೂಡ ಈ ವೇದಿಕೆಯಲ್ಲಿ ಇದ್ದರು.

ಕಪಿಲ್‌ ದೇವ್‌ ಬಳಿಕ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರು ಕೂಡ ವಿನೋದ್‌ ಕಾಂಬ್ಳಿಗೆ ಸಹಾಯ ನೀಡುವುದಾಗಿ ತಿಳಿಸಿದ್ದರು ಹಾಗೂ 1983ರ ವಿಶ್ವಕಪ್‌ ವಿಜೇತ ತಂಡದ ಆಟಗಾರರು ಕೂಡ ಕಾಂಬ್ಳಿಗೆ ನೆರವು ನೀಡಲಿದ್ದಾರೆಂದು ತಿಳಿಸಿದ್ದರು. ಇದರ ನಡುವೆ ಇತ್ತೀಚೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಪಿಲ್‌ ದೇವ್‌ ಮತ್ತೊಮ್ಮೆ ವಿನೋದ್‌ ಕಾಂಬ್ಳಿ ಅವರ ಮಾತನಾಡಿದ್ದಾರೆ.

“ನಮಗಿಂತ, ಅವರ (ಕಪಿಲ್‌ ದೇವ್‌) ಆರೋಗ್ಯದ ಬಗ್ಗೆ ಅವರೇ ಮೊದಲಿಗೆ ಕಾಳಜಿ ವಹಿಸಬೇಕಾಗಿದೆ. ಅವರು ತಮ್ಮ ಹಿಂದಿನ ದಿನಗಳಿಗೆ ಹೋಗಿ ತಾವು ಹೇಗಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಒಬ್ಬ ಕ್ರೀಡಾಪಟುವಾಗಿ ನಾನು ಅವರಿಗೆ ಬೆಂಬಲ ನೀಡುತ್ತೇನೆ. ಅವರು ಸದ್ಯ ತಮ್ಮ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ,” ಎಂದು ಕಪಿಲ್‌ ದೇವ್‌ ಬೇಸರ ವ್ಯಕ್ತಪಡಿಸಿದ್ದಾರೆ.

“ನಾವೆಲ್ಲರೂ ಅವರಿಗೆ ಬೆಂಬಲ ನೀಡುತ್ತೇವೆ. ಈಗಾಗಲೇ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ. 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರು ಕೂಡ ಅವರಿಗೆ ಅಗತ್ಯ ನೆರವು ನೀಡಲಿದ್ದಾರೆ. ಇದಕ್ಕೆ ನಾವು ಬದ್ದರಾಗಿದ್ದೇವೆ. ಆದರೆ, ತಮ್ಮ ಆರೋಗ್ಯದ ಬಗ್ಗೆ ವಿನೋದ್‌ ಕಾಂಬ್ಳಿ ಅವರೇ ಮೊದಲ ಗಮನಹರಿಸಬೇಕು ಹಾಗೂ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ತನ್ನ ಆರೋಗ್ಯದ ಬಗ್ಗೆ ಅವರು ಹೆಚ್ಚಿನ ಗಮನ ನೀಡಿದ್ದೇ ಆದಲ್ಲಿ ನಾವು ಅವರ ಜೊತೆ ಕೈ ಜೋಡಿಸಬಹುದು,” ಎಂದು ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ಗೆ ಕಾಂಬ್ಳಿ ಪರೋಕ್ಷ ಮನವಿ

ವಿನೋದ್‌ ಕಾಂಬ್ಳಿಗೆ ಅವರ ಮುಂಬೈ ತಂಡದ ಸಹ ಆಟಗಾರರು ಕೂಡ ನೆರವು ನೀಡಬೇಕೆಂದು ಕಪಿಲ್‌ ದೇವ್‌ ಆಗ್ರಹಿಸಿದ್ದಾರೆ. ವಿನೋದ್‌ ಕಾಂಬ್ಳಿ ಅವರ ಜತೆ ಮುಂಬೈ ತಂಡದಲ್ಲಿ ಸಚಿನ್‌ ತೆಂಡೂಲ್ಕರ್‌, ಪರಾಸ್‌ ಮಾಂಬ್ರೀ, ಪ್ರವೀಣ್‌ ಆಮ್ರೆ ಆಡಿದ್ದಾರೆ. ಈ ಎಲ್ಲಾ ಆಟಗಾರರು ಕೂಡ ಕಾಂಬ್ಳಿ ಜೊತೆ ದೀರ್ಘಾವಧಿ ಕ್ರಿಕೆಟ್‌ ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿನೋದ್‌ಗೆ ಅವರ ಆತ್ಮೀಯ ಸ್ನೇಹಿತರು ಕೂಡ ನೆರವಾಗಬೇಕೆಂದು ಮಾಜಿ ನಾಯಕ ಆಗ್ರಹಿಸಿದ್ದಾರೆ.

“ಅವರ ಆರೋಗ್ಯ ಸ್ಥಿತಿಯನ್ನು ನೋಡಿದ ಬಳಿಕ ಎಲ್ಲಾ ಕ್ರಿಕೆಟಿಗರಿಗೂ ಬೇಸರವಾಗಿದೆ. ವಿನೋದ್‌ ಕಾಂಬ್ಳಿಯ ಆತ್ಮೀಯ ಸ್ನೇಹಿತರು ಅವರ ಬಳಿ ಸಮಯ ಕಳೆಯಬೇಕು ಹಾಗೂ ಮೊದಲಿನಂತೆ ಅವರು ಮರಳಲು ಸಹಾಯ ಮಾಡಬೇಕು. ಆ ಮೂಲಕ ಅವರ ಅನಾರೋಗ್ಯದಿಂದ ಗುಣಮುಖರಾಗಲು ನೆರವು ನೀಡಬೇಕು,” ಎಂದು ಕಪಿಲ್‌ ದೇವ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Vinod Kambli ನನ್ನ ಮಗನಿದ್ದಂತೆ, ಅವರನ್ನು ನೋಡಿಕೊಳ್ಳುತ್ತೇವೆ: ಸುನೀಲ್‌ ಗವಾಸ್ಕರ್‌!