Tuesday, 13th May 2025

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಪಿನ್ನರ್ ವರುಣ್ ಚಕ್ರವರ್ತಿ

ಚೆನ್ನೈ: ಐಪಿಎಲ್ 2020ಯಲ್ಲಿ ಕೆಕೆಆರ್ ಪರವಾಗಿ ಮಿಂಚು ಹರಿಸಿದ್ದ ತಮಿಳುನಾಡು ಮೂಲದ ರಿಸ್ಟ್ ಸ್ಪಿನ್ನರ್ ವರುಣ್ ಚಕ್ರವರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ದೀರ್ಘ ಕಾಲದ ಪ್ರೇಯಸಿಯೊಂದಿಗೆ ವರುಣ್ ವಿವಾಹ ಬಂಧನಕ್ಕೆ ಒಳಗಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಚೆನ್ನೈನಲ್ಲಿ ಕುಟುಂಬದ ಆಪ್ತ ವಲಯದ ಹಾಜರಿಯಲ್ಲಿ ವರುಣ್ ಚಕ್ರವರ್ತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಹಾಗೂ ಕ್ರಿಕೆಟಿಗರು ತಮಿಳುನಾಡಿದ ಈ ಕ್ರಿಕೆಟರ್‌ಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ವರುಣ್ ಚಕ್ರವರ್ತಿ ಕೊಲ್ಕತಾ ನೈಟ್ ರೈಡರ್ಸ್ ಪರ ಅದ್ಭುತ ದಾಳಿಯನ್ನು ಸಂಘಟಿಸಿ ಮಿಂಚಿ ದ್ದರು. 13 ಪಂದ್ಯಗಳನ್ನು ಆಡಿದ ವರುಣ್ 17 ವಿಕೆಟ್ ಪಡೆದಿದ್ದರು. 20.94 ಸರಾಸರಿ ಹಾಗೂ 6.85ರ ಎಕಾನಮಿಯಲ್ಲಿ ವರುಣ್ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಹೀಗಾಗಿ ಐಪಿಎಲ್‌ನ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯಗಾಗಿ ಸೀಮಿತ ಓವರ್‌ಗಳ ತಂಡಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾದರು. ಆದರೆ ಭುಜದ ನೋವಿನ ಕಾರಣದಿಂದಾಗಿ ಟೀಮ್ ಇಂಡಿಯಾ ಜೊತೆಗೆ ಪ್ರಯಾಣಿಸುವ ಅವಕಾಶ ಕಳೆದುಕೊಂಡರು.

Leave a Reply

Your email address will not be published. Required fields are marked *