Tuesday, 13th May 2025

ಅಶ್ವಿನ್‌-ಹನುಮ ಸ್ಥಿರ ಬ್ಯಾಟಿಂಗ್‌: ಮೂರನೇ ಟೆಸ್ಟ್ ಪಂದ್ಯ ಡ್ರಾ

ಸಿಡ್ನಿ: ಆಸೀಸ್‌ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಈ ಫಲಿತಾಂಶದಿಂದ ಟೀಂ ಇಂಡಿಯಾ ಪಾಳೆಯದಲ್ಲಿ ಸಂತಸ ಮನೆ ಮಾಡಿದೆ.

ರವಿಚಂದ್ರನ್‌ ಅವರ ಸಮಯೋಚಿತ ಬ್ಯಾಟಿಂಗ್‌ ಹಾಗೂ ಸರಣಿಯಲ್ಲಿ ಕಳಪೆ ನಿರ್ವಹಣೆ ತೋರಿದ್ದ ಹನುಮ ವಿಹಾರಿ ಸಿಡಿಯದೆ, ಕೆಟ್ಟ ಹೊಡೆತಕ್ಕೆ ಕೈ ಹಾಕದೆ, ಚಾಣಾಕ್ಷ ಆಟ ಆಡಿದರು.

ಕೀಪರ್‌ ರಿಷಬ್‌ ಪಂತ್‌ ಹಾಗೂ ಚೇತೇಶ್ವರ ಪೂಜಾರ ಅವರ ಸುದೀರ್ಘ ಹಾಗೂ ಬಹುಮೂಲ್ಯ ಇನ್ನಿಂಗ್ಸ್ ಬಳಿಕ, ತಂಡವನ್ನು ಗೆಲುವಿನ ದಡ ಮುಟ್ಟಿಸುವ ಅಥವಾ ಡ್ರಾ ದತ್ತ ಪಂದ್ಯವನ್ನು ಮುಖ ಮಾಡುವ ಹೊಣೆ ಆಲ್ರೌಂಡರ್‌ ರವಿಚಂದ್ರನ್‌ ಅಶ್ವಿನ್‌ ಅವರ ಹೆಗಲೇರಿತು. ಹಾಗೂ ಅದನ್ನು ಅವರು ಉತ್ತಮವಾಗಿಯೇ ನಿಭಾಯಿಸಿದರು.

ತಮ್ಮ ವೀರೋಚಿತ ಬ್ಯಾಟಿಂಗ್ ಸಾಹಸದಿಂದ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಟೀಂ ಇಂಡಿಯಾವನ್ನು ಮೇಲಕ್ಕೆತ್ತಿ ದ್ದರು. ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಎಡವಿದರು.

ಮೂರನೇ ಪಂದ್ಯ ಡ್ರಾ ಗೊಳ್ಳುವ ಮೂಲಕ ಉಭಯ ತಂಡಗಳು ಸರಣಿಯಲ್ಲಿ ಸಮಬಲದಲ್ಲಿವೆ. ನಾಲ್ಕನೇ ಟೆಸ್ಟ್‌ ಜನವರಿ 15ರಂದು ಬ್ರಿಸ್ಬೇನ್‌ ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಶತಕ ಬಾರಿಸಿದ ಆಸೀಸ್‌ ಆಟಗಾರ ಸ್ಟೀವ್‌ ಸ್ಮಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

 

Leave a Reply

Your email address will not be published. Required fields are marked *