Wednesday, 14th May 2025

ಟಿ20 ವಿಶ್ವಕಪ್’ಗಾಗಿ ಭಾರತೀಯ ತಂಡ ಶೀಘ್ರ ಪ್ರಕಟ

ದುಬೈ: 2021 ರಲ್ಲಿ ಟಿ 20 ವಿಶ್ವಕಪ್‌ ನಡೆಯಲಿದೆ. ಅಕ್ಟೋಬರ್ 17 ರಿಂದ ಓಮನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್’ಗಾಗಿ ಭಾರತೀಯ ತಂಡವನ್ನು ಇಂಗ್ಲೆಂಡ್ ಸರಣಿ ನಂತರ ಪ್ರಕಟಿಸಲಾಗುವುದು ಎನ್ನಲಾಗುತ್ತಿದೆ.

ಸೆ.7 ರಂದು ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ. ಆಯ್ಕೆಗಾರರು ಮತ್ತು ಟೀಮ್ ಇಂಡಿಯಾ ಮ್ಯಾನೇಜ್‌ ಮೆಂಟ್ ಈಗಾಗಲೇ ತಮ್ಮ ಆಟಗಾರರನ್ನು ನಿರ್ಧರಿಸಿದೆ ಎನ್ನಲಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಭಾರತ ತಂಡ ಟಿ20 ವಿಶ್ವಕಪ್ ಗೆ 15 ಆಟಗಾರರನ್ನು ಆಯ್ಕೆ ಮಾಡುತ್ತದೆ. ಇದಲ್ಲದೇ, 3 ಮೀಸಲು ಆಟಗಾರರನ್ನು ಕೂಡ ತನ್ನ ಜೊತೆ ಇರಿಸಿಕೊಳ್ಳಲಿದೆ.

ಅಕ್ಟೋಬರ್ 24 ರಿಂದ ಶುರುವಾಗುವ ಟಿ-20 ವಿಶ್ವಕಪ್ ನಲ್ಲಿ, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಇದರ ನಂತರ ಭಾರತ, ಅಕ್ಟೋಬರ್ 31 ರಂದು ನ್ಯೂಜಿಲ್ಯಾಂಡ್ ವಿರುದ್ಧ, ಅಫ್ಘಾನಿಸ್ತಾನದ ವಿರುದ್ಧ ನವೆಂಬರ್ 3ರಂದು ಆಡಲಿದೆ.

Leave a Reply

Your email address will not be published. Required fields are marked *