Tuesday, 13th May 2025

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರವಿಚಂದ್ರನ್‌ ಅಶ್ವಿನ್‌ ಇನ್‌, ಮೆಂಟರ್‌ ಆಗಿ ಧೋನಿ !

ಮುಂಬೈ: ಬಿಸಿಸಿಐ ಆತಿಥ್ಯದಲ್ಲಿ ಅ.17ರಿಂದ ಯುಎಇ, ಒಮಾನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಹಲವು ವರ್ಷಗಳಿಂದ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯಲು ವಿಫ‌ಲವಾಗಿದ್ದ ರವಿ ಚಂದ್ರನ್‌ ಅಶ್ವಿ‌ನ್‌ ವಿಶ್ವಕಪ್‌ ತಂಡಕ್ಕೆ ಕರೆ ಪಡೆದಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಕ್ಯಾಪ್ಟನ್ ಕೂಲ್‌, ಮಾಜಿ ನಾಯಕ ಎಂ.ಎಸ್‌.ಧೋನಿಯನ್ನು ತಂಡಕ್ಕೆ ಮೆಂಟರ್‌ ಆಗಿ ನಿಯೋಜಿಸ ಲಾಗಿದೆ. ಟಿ20 ವಿಶ್ವಕಪ್‌ ಅ.17ಕ್ಕೆ ಆರಂಭ ವಾಗಿ, ನ.14ಕ್ಕೆ ಮುಗಿಯಲಿದೆ. ವಿಶೇಷವೆಂದರೆ ವಿಶ್ವಕಪ್‌ ಮುಗಿದ ನಂತರ ರವಿಶಾಸ್ತ್ರಿ ಮತ್ತವರ ಬಳಗದ ಅವಧಿಯೂ ಮುಗಿಯಲಿದೆ.

ಸಮಕಾಲೀನ ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳ ಸಾಲಿನಲ್ಲಿ ಆರ್‌.ಅಶ್ವಿ‌ನ್‌ ಸ್ಥಾನ ಪಡೆದುಕೊಳ್ಳುತ್ತಾರೆ. ಅವರು ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ಕಡೆಯ ಬಾರಿಗೆ ಆಡಿದ್ದು 2017 ಜುಲೈನಲ್ಲಿ. ಅಂತಹದ್ದರಲ್ಲಿ ದಿಢೀರನೆ ಅಶ್ವಿ‌ನ್‌ರನ್ನು ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಬಹುತೇಕ ನಿರೀಕ್ಷಿತ ಆಟಗಾರರೇ ಸ್ಥಾನ ಪಡೆದಿದ್ದಾರೆ.

ಕರ್ನಾಟಕದವರ ಪೈಕಿ ಕೆ.ಎಲ್‌.ರಾಹುಲ್‌ ನಿರೀಕ್ಷೆಯಂತೆ ತಂಡದಲ್ಲಿದ್ದಾರೆ. ಆದರೆ ಮನೀಷ್‌ ಪಾಂಡೆ ಸ್ಥಾನ ಕಳೆದುಕೊಂಡಿದ್ದಾರೆ. ಪ್ರತಿಭಾವಂತರಾಗಿದ್ದರೂ ಅವಕಾಶ ಸಿಗದ ದುರದೃಷ್ಟವಂತ ಮನೀಷ್‌ ಎನ್ನಬೇಕಾಗಿದೆ.

ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್‌ ಚಹರ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.
ಮೆಂಟರ್‌: ಎಂ.ಎಸ್‌.ಧೋನಿ
ಹೆಚ್ಚುವರಿ ಆಟಗಾರರು: ಶಾರ್ದೂಲ್ ಠಾಕೂರ್‌, ಶ್ರೇಯಸ್‌ ಐಯ್ಯರ್‌, ದೀಪಕ್‌ ಚಹರ್‌.
ಸ್ಥಾನ ಕಳೆದುಕೊಂಡವರು: ಶಿಖರ್‌ ಧವನ್‌, ಪೃಥ್ವಿ ಶಾ, ಯಜುವೇಂದ್ರ ಚಹಲ್‌.

Leave a Reply

Your email address will not be published. Required fields are marked *